September 16, 2024

Bhavana Tv

Its Your Channel

ಮುಖ್ಯಮಂತ್ರಿಗಳು ಯಾವ ಖಾತೆಯನ್ನು ಕೊಟ್ರು ಪ್ರಸಾದ ಎಂದು ಸ್ವೀಕರಿಸುತ್ತೇನೆ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಗೌರವ ತರುವ ಕೆಲಸ ಮಾಡುತ್ತೇನೆ ಸಚಿವ ಶಿವರಾಮ ಹೆಬ್ಬಾರ್

ಮುಖ್ಯಮಂತ್ರಿಗಳು ಯಾವ ಖಾತೆಯನ್ನು ಕೊಟ್ರು ಪ್ರಸಾದ ಎಂದು ಸ್ವೀಕರಿಸುತ್ತೇನೆ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಗೌರವ ತರುವ ಕೆಲಸ ಮಾಡುತ್ತೇನೆ ಎಂದು ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಸಚಿವ ಶಿವರಾಮ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ.

ಸಚಿವರಾಗಿ ಪ್ರಮಾಣ ಸ್ವೀಕರಿಸ ನಂತರ ಸಿರ್ಸಿಗೆ ಆಗಮಿಸಿದ ಸಚಿವ ಹೆಬ್ಬರ್ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸಿ ಮಾದ್ಯಮರೊಂದಿಗೆ ಮಾತನಾಡಿದರು, ಪಕ್ಷದ್ರೋಹಿಗಳು ಎಲ್ಲೇ ಸಚಿವರಾದ್ರೂ ಅವರು ಅನರ್ಹರೇ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮತನಾಡಿದ ಅವರು ಸಿದ್ದರಾಮಯ್ಯನವರು ಘನತೆಗೆ ತಕ್ಕ ಮಾತನ್ನು ಆಡಿದ್ರೆ ಒಳ್ಳೇದು. ಘನತೆ ಮೀರಿ ಮಾತನಾಡಿದ್ರೆ ಅವರ ಗೌರವಕ್ಕೆ ಶೋಭೆ ತರುವುದಿಲ್ಲ, ಸಿದ್ದರಾಮಯ್ಯನ ಭಾಷೆಲಿ ಉತ್ತರ ಕೊಡಲು ನಮಗೂ ಬರುತ್ತೆ ಆದ್ರೆ ನಾವೇಲ್ರು ಬಹಳ ತಾಳ್ಮೆಯಿಂದ ಶಬ್ದ ಬಳಸ್ತಾ ಇದ್ದೀವಿ. ನಮಗೆ ಯಾರ ಭಯವೂ ಇಲ್ಲ, ಸಿದ್ದರಾಮಯ್ಯನವರನ್ನು ಸಮಾಧಾನ ಪಡಿಸುವ ಅವಶ್ಯಕತೆ, ಅನಿವಾರ್ಯತೆ ನಮಗಿಲ್ಲ. ಅವರು ಘನತೆಗೆ ತಕ್ಕ ಮಾತನಾಡಿದ್ರೆ ಅವರಿಗೂ ಒಳ್ಳೆಯದು, ಅವರ ಆರೋಗ್ಯಕ್ಕೂ ಒಳ್ಳೆಯದು ಎಂದಿದ್ದಾರೆ.

error: