September 14, 2024

Bhavana Tv

Its Your Channel

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಒಡೆದು ನುಚ್ಚುನೂರು ಮಾಡಬೇಕು ಎನ್ನುವ ಆಸೆ ನನ್ನದು ಸಚಿವ ನಾರಾಯಣಗೌಡ

ಕನಿಷ್ಠ ನಾಲ್ಕೈದು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಇಂದಿನಿAದಲೇ ಕಾರ್ಯತಂತ್ರ ಜಯ..ಜಿಲ್ಲೆಯ ಅಭಿವೃದ್ಧಿಯೇ ಮೂಲಮಂತ್ರ.

ಬಿಜೆಪಿ ಪಕ್ಷಕ್ಕೆ ನಾನು ಬಂದಿದ್ದು ದೇವರ ಮನೆಗೆ ಬಂದಷ್ಟು ಸಂತೋಷವಾಗಿದೆ.

ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ಆಶೀರ್ವಾದ ಸಿಕ್ಕಂತಾಗಿದೆ .

ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯನ್ನು ಒಡೆಯಲು ನನ್ನ ಬಳಿ ಸುತ್ತಿಗೆಯಿದೆ.

ಜೆಡಿಎಸ್ ಕೋಟೆ ಮುಂದಿನ ದಿನಗಳಲ್ಲಿ ನುಚ್ಚುನೂರಾಗಲಿದೆ.

ಜಿಲ್ಲೆಯ ೭ ಕ್ಷೇತ್ರಗಳ ಪೈಕಿ ಕನಿಷ್ಠ ನಾಲ್ಕೈದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಬಿಜೆಪಿ ಬಾವುಟವನ್ನು ಹಾರಿಸುತ್ತೇನೆ.

ನಾನು ಯಡಿಯೂರಪ್ಪ ಅವರ ಕಿರಿಯ ಪುತ್ರನಾಗಿದ್ದೇನೆ.

ಯಡಿಯೂರಪ್ಪ ಅವರನ್ನು ತಂದೆಯ ಸ್ವರೂಪದಲ್ಲಿ ಕಾಣುತ್ತಿದ್ದೇನೆ.

ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಪ್ಪದ ರಾಜಕಾರಣಿಯಾಗಿದ್ದಾರೆ.

ಅವರಿ ಒಮ್ಮೆ ಮಾತುಕೊಟ್ಟರೆ ಮುಗೀತು, ನುಡಿದಂತೆ ನಡೀತಾರೆ ಕುಮಾರಣ್ಣನಂಗೆ ಕೆನ್ನೆ ಸವರಿ ನಯಸ್ಸು ಮಾಡಿ ಸುಳ್ಳು ಹೇಳಲ್ಲ.

ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ಬಲಿಷ್ಠವಾಗಲಿದೆ..

.

ಹಾಸನ ಶಾಸಕ ಪ್ರೀತಂಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡಪಾಟೀಲ್, ರಾಜ್ಯ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ತಮ್ಮೇಶಗೌಡ, ಶರಣೂ, ಮಂಡ್ಯಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು, ಸಿಂದಘಟ್ಟ ಅರವಿಂದ್, ಎಸ್.ಸಿ.ಅಶೋಕ್, ಮಾಜಿಶಾಸಕ ಬಿ.ಪ್ರಕಾಶ್, ಕಾಂಗ್ರೆಸ್ ಯುವಮುಖಂಡ ಇಂಡವಾಳು ಸಚ್ಚಿದಾನಂದ, ಯಮದೂರು ಸಿದ್ಧರಾಜು, ಡಾ.ಎಸ್.ಕೃಷ್ಣಮೂರ್ತಿ, ಬೂಕನಕೆರೆ ಜವರಾಯಿಗೌಡ, ಚಂದಗಾಲು ಶಿವಣ್ಣ, ಕೊಡಗಹಳ್ಳಿ ವೆಂಕಟೇಶ್, ವಿಶ್ರಾಂತ ಎಂಜಿನಿಯರ್ ಲಕ್ಕೇಗೌಡ, ಚಿತ್ರನಟ ಅರವಿಂದ್, ಆದರ್ಶ ಸುಗಮ ಸಂಗೀತ ಅಕಾಡೆಮಿಯ ಅಧ್ಯಕ್ಷ ಡಾ.ಕಿಕ್ಕೇರಿಕೃಷ್ಣಮೂರ್ತಿ, ಕಿಕ್ಕೇರಿ ಪ್ರಭಾಕರ್, ಕೆ.ಜಿ.ತಮ್ಮಣ್ಣ, ಕೆ.ಶ್ರೀನಿವಾಸ್, ಕೆ.ನಾಗಣ್ಣಗೌಡ, ಡಾ.ಸಿದ್ಧರಾಮಯ್ಯ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಸಚಿವ ನಾರಾಯಣಗೌಡರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

error: