March 29, 2024

Bhavana Tv

Its Your Channel

ಕದಂಬೋತ್ಸವದ ಅಂಗವಾಗಿ ಫೆ.8 ರಂದು ಕಾರ್ಯಕ್ರಮಗಳು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿನಡೆಯಲಿದೆ. ಕದಂಬೋತ್ಸವದ ಉದ್ಘಾಟನಾ ಸಮಾರಂಭ ಸಂಜೆ 6:30 ನಡೆಯಲಿದೆ ಹಾಗೂ ಇದೆ ವೇಳೆ ಪಂಪ ಪ್ರಶಸ್ತಿ ಪ್ರಧಾನ ಸಮಾರಂಭ ಕೂಡ ನಡೆಯಲಿದೆ

ಫೆ.8 ರಂದು ಸಂಜೆ 4ರಿಂದ ವಿವಿಧ ಮನೋರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಎನ್.ವಿ.ಲಲಿತಾ ಮತ್ತು ತಂಡದಿಂದ ಭಕ್ತಿಗೀತೆ, ಅನುಷಾಸುರೇಶ ಮತ್ತು ತಂಡದಿಂದ ನೃತ್ಯ ರೂಪಕ (ಭರತ ನಾಟ್ಯ), ಉಡುಪಿಯ ದುರ್ಗಾಪರಮೇಶ್ವರಿ ಚಂಡೆ ಬಳಗದ ಮಹಿಳೆಯರಿಂದ ಚಂಡೆ ವಾದನ, ಬೆಂಗಳೂರಿನ ನಾರಾಯಣ ಭಟ್ ಮತ್ತು ತಂಡದಿಂದ ಜಾದೂ ಪ್ರದರ್ಶನ, ಮಂಜುನಾಥ ಭಜಂತ್ರಿ ಅವರಿಂದ ಶಹನಾಯಿ ವಾದನ, ಚಿತ್ರದುರ್ಗದ ನಾಗಶ್ರೀ ಎಂ.ಪಿ ಮತ್ತು ತಂಡದಿಂದದ ಮೋಹಿನಿ ಅಟ್ಟಂ ಡ್ಯಾನ್ಸ್, ಶಿರಸಿಯ ಯಕ್ಷಗೆಜ್ಜೆ ಕಲಾವಿದರಿಂದ ಯಕ್ಷ ರೂಪಕ (ಯಕ್ಷಗಾನ), ಯಲ್ಲಾಪುರದ ಭಾರತೀಯ ನೃತ್ಯ ಕಲಾಕೇಂದ್ರದಿಂದ ಭಾರತೀಯ ನೃತ್ಯ ರೂಪಕ, ಬಳ್ಳಾರಿಯ ಜಿ.ಚಂದ್ರಕಾಂತ ಅವರಿಂದ ಗಜಲ್ ಗಾಯನ ಇರಲಿದೆ.
ಮನೋರಂಜನಾ ಕಾರ್ಯಕ್ರಮದ ಅತಿಥಿಯಾಗಿ ಕನ್ನಡದ ಖ್ಯಾತ ನಟ ರಕ್ಷಿತ್ ಶೆಟ್ಟಿ ಆಗಮಿಸಲಿದ್ದಾರೆ. ಇದರೊಂದಿಗೆ, ಸಂಜೆ 6 ರಿಂದ ಮುಂಬೈನ ಎಮ್‌ಜೆ5 ತಂಡದಿಂದ ನೃತ್ಯ, ರಾತ್ರಿ 8:30 ರಿಂದ ಅರ್ಜನ್ ಜನ್ಯ ಮತ್ತು ತಂಡದವರಿಂದ ಮನೋರಂಜನಾ ಕಾರ್ಯಕ್ರಮ ಜರುಗಲಿವೆ
ಯಾವ ಖಾತೆ ಕೊಟ್ರು ಪ್ರಸಾದವೆಂದು ಸ್ವೀಕರಿಸುತ್ತೇನೆ -ಶಿವರಾಮ ಹೆಬ್ಬಾರ್

ವೇದಿಕೆ ಎದುರಿಗೆ 10 ಸಾವಿರ ವ್ಯಾಟ್ ನ ಸೌಂಡ್ ಸಿಸ್ಟಮ್ ಹಾಗೂ ವೇದಿಕೆ ಹಿಂಬಾಗದಲ್ಲಿ 20 ಸಾವಿರ ವ್ಯಾಟ್‌ನ ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ. 500 ವಿಐಪಿ ಕುರ್ಚಿ ಹಾಕಲಾಗುತ್ತದೆ. ಒಟ್ಟಾರೆ ಒಟ್ಟೂ 3000‌ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಯೂರವರ್ಮ ವೇದಿಕೆಯಲ್ಲಿ ಸಿವಿಲ್ ಕಾಮಗಾರಿ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಕಲಾತ್ಮಕ ವಿನ್ಯಾಸದ ಕೆಲಸಗಳು ನಡೆಯುತ್ತಿವೆ.
ವೇದಿಕೆಗೆ ತೆರಳುವ ಮಾರ್ಗದಲ್ಲಿ ಬಣ್ಣದ ಧ್ವಜಗಳನ್ನು ಸಾಲಾಗಿ ನಿಲ್ಲಿಸಿದ್ದು, ಆಕರ್ಷಿಸುವಂತಿವೆ. ಹೊರ ಭಾಗದಲ್ಲಿ 40 ಕ್ಕೂ ಹೆಚ್ಚು ಮಳಿಗೆ ನಿರ್ಮಿಸಲಾಗಿದೆ. ಬನವಾಸಿ ಪಟ್ಟಣ ಮದುಮಗಳಂತೆ ಶೃಂಗಾರಗೊಂಡಿದೆ. ಎಲ್ಲೆಂದರಲ್ಲಿ ಬ್ಯಾನರ್, ಪೋಸ್ಟರ್‌ಗಳು ಕಂಗೊಳಿಸುತ್ತಿವೆ. ಕದಂಬೋತ್ಸವ ಯಶಸ್ಸಿಗೆ ರಚನೆಯಾದ ವಿವಿಧ ಉಪ ಸಮಿತಿಗಳು ರಾತ್ರಿ ಹಗಲೇನ್ನದೇ ಕೆಲಸ ನಿರ್ವಹಿಸುತ್ತಿವೆ.
ಭರದ ಪ್ರಚಾರ: ತಾಲೂಕಿನ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವದ ಕುರಿತು ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಪ್ರಚಾರ ನಡೆಸುವ ಭಾಗವಾಗಿ ಕ್ರೀಡಾ ಸ್ಪರ್ಧೆಗಳು ಈಗಾಗಲೇ ಜರುಗಿದ್ದು, ಫೆ. 8 ರಂದು ಮ್ಯಾರಥಾನ್ ನಡೆಯಲಿದೆ.
ಸರಕಾರಿ ಇಲಾಖೆಗಳ ಮಳಿಗೆಗಳೊಂದಿಗೆ ಇತರೆ ನಲವತ್ತಕ್ಕೂ ಹೆಚ್ಚು ಮಳಿಗೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆಯಾಗಿದೆ. ಕದಂಬೋತ್ಸವದ ಅಂಗವಾಗಿ ರಾಜ್ಯ ಹಾಗೂ ಹೊರ ರಾಜ್ಯದ ಅನೇಕ ವಿವಿಧ ಜಿಲ್ಲೆಗಳ ಸಾವಯವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಭದ್ರತಾ ವ್ಯವಸ್ಥೆ ಪರಿಶೀಲಿಸಿದ ಎಸ್ಪಿ

ಇತಿಹಾಸ ಪ್ರಸಿಧ್ದ ಸ್ಥಳ ಕದಂಬರ ರಾಜಧಾನಿ ಬನವಾಸಿಯಲ್ಲಿ ಫೆಬ್ರವರಿ ೮ ಮತ್ತು ೯ ರಂದು ಎರಡು ದಿನಗಳ ಕಾಲ ನಡೆಯುಲಿರುವ ಅದ್ಧೂರಿ ಕದಂಬೋತ್ಸವದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಸಚಿವರು ಹಾಗೂ ಶಾಸಕರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಬನವಾಸಿ ಮಯೂರ ವರ್ಮ ವೇದಿಕೆ ಸೇರಿದಂತೆ ಇತರ ವೇದಿಕೆಗಳ ಭದ್ರತಾ ವ್ಯವಸ್ಥೆಯನ್ನು ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಶುಕ್ರವಾರ ಪರಿಶೀಲಿಸುವ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು.
ಯಾವದೇ ಲೋಪದೋಷಗಳು ಉಂಟಾಗದಂತೆ ನೋಡಿಕೊಳ್ಳುವಂತೆ ಭದ್ರತಾ ಸಿಬ್ಬಂದಿಗಳಿಗೆ ತಿಳಿಸಿದರು. ಪರಿಶೀಲನಾ ಸಮಯದಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೆರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಕಾರ್ಯಕ್ರಮ ತಯಾರಿಯ ಬಗ್ಗೆ ವಿವರಣೆ ನೀಡಿದರು.

error: