April 23, 2024

Bhavana Tv

Its Your Channel

ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ -ಶಾಸಕ ನಾರಾಯಣಗೌಡ

ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕ ನಾರಾಯಣಗೌಡ ಅವರು ಇಂದು ತಮ್ಮ ಹುಟ್ಟೂರು ಕೆ.ಆರ್.ಪೇಟೆ ತಾಲೂಕಿನ ಕೈಗೋನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮನೆದೇವರು ವೀರಭದ್ರೇಶ್ವರ ಸ್ವಾಮಿಗೆ ಭಕ್ತಿನಮನ ಸಲ್ಲಿಸಿದರು…

ಕೈಗೋನಹಳ್ಳಿ ಗ್ರಾಮದಲ್ಲಿ ತಮ್ಮ ಅತ್ತೆ ಚೆನ್ನಮ್ಮ ಅವರೊಂದಿಗೆ ಕುಶಲೋಪರಿ ನಡೆಸಿ, ಅವರ ಪುತ್ರ ಭದ್ರೇಗೌಡ ಅವರು ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಭದ್ರೇಗೌಡ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು…

ಕೈಗೋನಹಳ್ಳಿ ಗ್ರಾಮದ ರಸ್ತೆಗಳಲ್ಲಿ ಸಂಚಾರ ನಡೆಸಿದ ಸಚಿವ ನಾರಾಯಣಗೌಡ ಗ್ರಾಮದ ಹಿರಿಯರೊಂದಿಗೆ ಕುಶಲೋಪರಿ ನಡೆಸಿದರು…ದುಃಖದ ಸಂದರ್ಭದಲ್ಲಿ ಹುಟ್ಟೂರಿಗೆ ಭೇಟಿ ನೀಡಿದ್ದೇನೆ…ಖಾತೆ ಹಂಚಿಕೆಯಾದ ನಂತರ ಕೃಷ್ಣರಾಜಪೇಟೆ ಪಟ್ಟಣಕ್ಕೆ ಭೇಟಿ ನೀಡಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಸಮಾಲೋಚನೆ ನಡೆಸಿ ಬಿಜೆಪಿ ಪಕ್ಷದ ಕಛೇರಿಗೆ ತೆರಳಿ ಧನ್ಯವಾದಗಳನ್ನು ಸಮರ್ಪಿಸುವುದಾಗಿ ತಿಳಿಸಿದರು…ಈ ಸಂದರ್ಭದಲ್ಲಿ ಸಚಿವರ ಧರ್ಮಪತ್ನಿ ದೇವಕಿನಾರಾಯಣಗೌಡ, ಮುಖಂಡರಾದ ದೊಡ್ಡಕ್ಯಾತನಹಳ್ಳಿ ಪರಮೇಶ್, ಕಿಕ್ಕೇರಿ ಕುಮಾರ್, ದಯಾನಂದ, ನಾಯಕನಹಳ್ಳಿ ಕುಮಾರ್, ಕೊಡಗಹಳ್ಳಿ ವೆಂಕಟೇಶ್, ಚಂದ್ರಮೋಹನ್ ಮತ್ತಿತರರು ಉಪಸ್ಥಿತರಿದ್ದರು….

error: