May 30, 2023

Bhavana Tv

Its Your Channel

ಮಂತ್ರಿಗಿರಿ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುವುದಾಗಿ ಹೇಳಿದ್ದ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಅಥಣಿ ಮತದಾರರು ಆಕ್ರೋಶ ಹೊರಹಾಕಿದ್ದಾರೆ.

ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲವಾಗಿರುವ ಮಹೇಶ್ ಕುಮಟಳ್ಳಿ ಅವರು ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ಹೀಗಾಗಿ ಅವರ ವಿರುದ್ದ ಸಾಮಾಜಿಕ ಜಾಲತಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಕಚೇರಿ ಕಸಗುಡಿಸುವ ಕೆಲಸ ಮುಗಿದಿದ್ದರೆ ದಯವಿಟ್ಟು ಅಥಣಿ ಮತಕ್ಷೇತ್ರಕ್ಕೆ ಬನ್ನಿ. ಇನ್ನಾದರೂ ಪ್ರವಾಹ ಸಂತ್ರಸ್ತರ ಗೋಳು ಕೇಳಿ ಎಂದು ಅಥಣಿಯ ಪ್ರಮೋದ ಹಿರೇಮನಿ ಎಂಬುವರು ಪೋಸ್ಟ್ ಹಾಕಿದ್ದಾರೆ.

ಮಹೇಶ್​ ಕುಮಟಳ್ಳಿ ಕಳೆದ ಒಂದು ವಾರದಿಂದಲೂ ಕ್ಷೇತ್ರದ ಜನತೆಗೆ ಸಿಗುತ್ತಿಲ್ಲ. ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿ ಹೋಗಿರುವ ಅಥಣಿ ತಾಲೂಕಿನ ವಿವಿಧ ಗ್ರಾಮಗಳು ಪ್ರವಾಹದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು ಅವರಿಗೆ ಪರಿಹಾರ ಬಂದಿಲ್ಲ

About Post Author

error: