April 12, 2024

Bhavana Tv

Its Your Channel

ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.

ಹೊನ್ನಾವರ ; ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಅಧ್ಯಕ್ಷ ಎಸ್.ಆರ್.ಹೆಗಡೆ ಮಾತನಾಡಿ ದಕ್ಷಿಣ ನಾಸಿಕ ಕ್ಷೇತ್ರ ಎನ್ನುವ ಹಿರಿಮೆ ಹೊಂದಿರುವ ಮುಗ್ವಾ ಸುಬ್ರಹ್ಮಣ್ಯ ದೇವರಿಗೆ ನೂತನವಾಗಿ ನಿರ್ಮಾಣವಾದ ಮಹದ್ವಾರ, ರಾಜಗೋಪುರ, ಸುವರ್ಣ ಕವಚ ಮತ್ತು ರಜತ ಪಲ್ಲಕ್ಕಿ ಸಮರ್ಪಣೆ, ರಜತ ಕಲಶ ಪ್ರತಿಷ್ಠೆ ಫೆಬ್ರವರಿ ೩ ರಿಂದ ೬ ರವರೆಗೆ ಜರುಗಲಿದೆ. ಫೆಬ್ರವರಿ ೩ ರಂದು ಹಾಲಕ್ಕಿ ಸಮಾಜದ ಸಾಂಪ್ರದಾಯಿಕ ಕುಣಿತದ ಮೂಲಕ ಭಾಸ್ಕೆರಿಯಿಂದ ಕ್ಷೇತ್ರದವರೆಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜಿಯವರನ್ನು ಸ್ವಾಗತಿಸಿ ಅವರ ಅಮೃತಹಸ್ತದಿಂದ ಮಹದ್ವಾರದ ಉದ್ಘಾಟನೆ ನಡೆಯಲಿದೆ. ಫೆಬ್ರವರಿ ೪ ರಂದು ಗಣಪತಿ ಹಾಗೂ ಸುಬ್ರಹ್ಮಣ್ಯ ದೇವರಿಗೆ ಸುವರ್ಣ ಕವಚ ಸಮರ್ಪಣೆ, ರಜತ ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ ಶ್ರೀಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ ಹಾರ್ನಳ್ಳಿ ಪಾಲ್ಗೊಳ್ಳುವರು. ರಾತ್ರಿ ೮ ಗಂಟೆಗೆ ಗಣಪತಿ ಹೆಗಡೆ ಇವರಿಂದ ಸುಂದರಕಾAಡ ಹರಿಕಥೆ ಪ್ರದರ್ಶನಗೊಳ್ಳಲಿದೆ.
ಫೆಬ್ರವರಿ ೫ ರಂದು ಸುಬ್ರಹ್ಮಣ್ಯ ದೇವರ ರಜತ ಕಲಶ ಪ್ರತಿಷ್ಠೆ, ರಾಜಗೋಪುರ ಕಲಶ ಪ್ರತಿಷ್ಠೆ, ಬ್ರಹ್ಮಕಲಾಭಿಷೇಕ, ಗುರುಭಿಕ್ಷೆ, ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚೀವರಾದ ಶಿವರಾಮ ಹೆಬ್ಬಾರ್, ಕೆಡಿಸಿಸಿ ನಿರ್ದೆಶಕರಾದ ಶಿವಾನಂದ ಹೆಗಡೆ, ಉದ್ಯಮಿದಾರರಾದ ವೆಂಕ್ರಟಮಣ ಹೆಗಡೆ, ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಿ ಅಂಬಿಗ, ಸದಸ್ಯರಾದ ಗೋವಿಂದ ಭಟ್, ಆಶಾ ಹೆಗಡೆ, ತೇಜಸ್ವಿನಿ ಹೆಗಡೆ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಣಪತಿ ಹೆಗಡೆ ತೋಟಿ ಇವರಿಂದ ಬ್ರಹ್ಮಕಲಾಪ ಯಕ್ಷಗಾನ ಜರುಗಲಿದೆ. ಮೂರು ದಿನವು ಮಧ್ಯಾಹ್ನ ಪ್ರಸಾದ ಭೋಜನ ಹಾಗೂ ಭಕ್ತರಿಗೆ ವಿವಿಧ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಎಮ್.ಭಟ್, ಎಸ್.ಜಿ.ಹೆಗಡೆ, ನಾರಾಯಣ ಹೆಗಡೆ, ಎಸ್.ಆರ್. ಭಟ್, ಜಿ.ಎಸ್.ಭಟ್, ಲಕ್ಷ್ಮೀನಾರಾಯಣ ಹೆಗಡೆ, ಕೃಷ್ಣಮೂರ್ತಿ ಹೆಗಡೆ, ಸತ್ಯನಾರಾಯಣ ಹೆಗಡೆ, ಕೆ.ವಿ.ಹೆಗಡೆ, ಎಸ್.ವಿ.ಭಟ್ ಉಪಸ್ಥಿತರಿದ್ದರು.

error: