
ಹೊನ್ನಾವರ ೧೫: ಕಡ್ಲೆ ಗ್ರಾಮದ ವೆಂಕಟ್ರಮಣ ಹೆಗಡೆ ಎಂಬುವವರ ಮೇಲೆ ಚಿರತೆ ಎರಗಿದಾಗ ಗಂಭೀರ ಗಾಯಗೊಂಡರು ಧೈರ್ಯದಿಂದ ಎದುರಿಸಿ ಚಿರತೆಯನ್ನು ಎದುರಿಸಿದ ಘಟನೆ ನಡೆದಿದೆ.
ನಿನ್ನೆ ಸಂಜೆ ೫-೦೦ ಗಂಟೆ ಸುಮಾರು ಕಡ್ಲೆ ಗ್ರಾಮದ ತಿರುವಿನಲ್ಲಿ ತನ್ನ ಮನೆಯಿಂದ ೫೦ ಅಡಿ ದೂರ ಬೆಟ್ಟಕ್ಕೆ ಹೋದಾಗ ಗುರ್ ಎಂದು ಸಪ್ಪಳ ಮಾಡುತ್ತ ಚಿರತೆ ಮೈಮೆಲೆ ಎರಗಿದಾಗ ಬಲಗೈಯಿಂದ ತಡೆದ. ಮತ್ತೆ ಎರಗಿದಾಗ ಎಡಗೈಯಿಂದ ತಡೆದ. ಎರಡು ಕೈ ಗಾಯವಾದಮೇಲೆ ಚಿರತೆ ಮೈಮೇಲೆ ಹಾರಿದಾಗ ನೆಲಕ್ಕೆ ಬಿದ್ದ. ಆಗ ಕೈಗೊಂದು ಕಲ್ಲು ಸಿಕ್ಕಿತು. ಬಿದ್ದ ಹೊಡೆತಕ್ಕೆ ಬಲಗೈ ಮುರಿದಿತ್ತು. ಮತ್ತೆ ಎರಗಿದಾಗ ಮುರಿದ ಕೈಯಿಂದಲೇ ಕಲ್ಲನ್ನು ಎತ್ತಿ ಚಿರತೆ ತಲೆಗೆ ಗುದ್ದಿದಾಗ ಅದು ಓಡಿಹೋಗಿದೆ.
ಸರಕಾರಿ ಆಸ್ಪತ್ರೆಗೆ ದಾಖಲಾಗಿ ಈ ಹೊಯ್ಸಳ ವೆಂಕಟ್ರಮಣ ತಿಮ್ಮಣ್ಣ ಹೆಗಡೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ವರ್ಷದಿಂದ ಅಂಕೋಲಾ, ದಾಂಡೇಲಿ, ಹೊನ್ನಾವರ ಭಾಗದ ಕಿರು ಅರಣ್ಯ ಪ್ರದೇಶದ ಜನವಸತಿ ಇರುವಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ದನಗಳನ್ನು ತಿಂದಿದೆ. ನಿನ್ನೆ ಮನುಷ್ಯರ ಮೇಲೆ ಎರಗಿದೆ. ಧೈರ್ಯವಂತನಾಗಿದ್ದರಿAದ ಉಳಿದುಕೊಂಡಿದ್ದಾನೆ ವೆಂಕಟ್ರಮಣ. ಅರಣ್ಯ ಇಲಾಖೆ ಎಚ್ಚರವಹಿಸಬೇಕಾಗಿದೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.