April 23, 2024

Bhavana Tv

Its Your Channel

ಗುರುಪ್ರಸಾದ ಹೈಸ್ಕೂಲ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮ ಶಿರಾಲಿಯ ಚಿತ್ರಾಪುರ ಮಠದ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ದಿವ್ಯ ಸಾನಿಧ್ಯ ದಿಲ್ಲಿ ನಡೆಯಿತು.

ಕುಮಟಾ-ಹೊನ್ನಾವರ: ಗುರುಪ್ರಸಾದ ಎಜುಕೇಶನ್ ಸೊಸೈಟಿ, ಗುರುಪ್ರಸಾದ ಪ್ರೌಢಶಾಲೆ ಹಾಗೂ ಪರಿಜ್ಞಾನ ಪೂರ್ವವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸುವರ್ಣ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಶ್ರೀ ಗಳಿಂದ ಪರಿಜ್ಞಾನ ಸಭಾಭವನ, ನೂತನವಾಗಿ ನಿರ್ಮಿಸಿದ ಶಾಲಾ ಕೋಠಡಿಯನ್ನು ಉದ್ಘಾಟಿಸಿದರು. ನಂತರ ಪರಿಜ್ಞಾನನಾಶ್ರಮ ಸ್ವಾಮಿಗಳ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪರಿಜ್ಞಾನ ಪೂರ್ವ ವಿದ್ಯಾರ್ಥಿಗಳ ಸಂಘವು ಸುವರ್ಣ ಮಹೋತ್ಸವ ಸುಂದರ ಕಾರ್ಯಕ್ರಮ ಹಮ್ಮಿಕೊಂಡು, ಇತರ ಪ್ರೌಢಶಾಲೆಗಳಿಗೆ ಮಾದರಿಯಾಗಿದೆ ಎಂದರು.

ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಕೆ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಯಶಸ್ಸಿನ ತುದಿಯಲ್ಲಿದ್ದರೂ, ಮಾನವೀಯ ಮೌಲ್ಯಗಳನ್ನು ಮರೆಯಬಾರದು. ಇಂದಿನ ಆಧುನಿಕ ಯುಗದಲ್ಲಿ ಖಾಸಗಿ ಶಾಲೆಗಳ ಪ್ರಭಾವದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿದೆ. ಅದರ ನಡುವೆಯೂ ಗುರುಪ್ರಸಾದ ಪ್ರೌಢಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದ ಅವರು, ವೈಜ್ಞಾನಿಕ ಕ್ರಾಂತಿಯಲ್ಲಿ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವುದು ಬೇಸರದ ಸಂಗತಿ ಎಂದರು.

ಗುರುಪ್ರಸಾದ ಪ್ರೌಢಶಾಲೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡುಗೆ ನೀಡುತ್ತಿರುವುದನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದ್ದು, ಮಾದರಿ ಶಿಕ್ಷಣ ಸಂಸ್ಥೆಯಾಗಿ ಕಳೆದ ೫೦ ವರ್ಷಗಳಿಂದ ನಿಸ್ವಾರ್ಥ ಸೇವೆ ನೀಡುವ ಮೂಲಕ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟ ಸುಧಾರಿಸುತ್ತಿರುವ ಈ ಪ್ರೌಢಶಾಲೆ ಚಟುವಟಿಕೆಗಳು ಇತರ ಪ್ರೌಢಶಾಲೆಗಳಿಗೆ ಮಾದರಿ ಎಂದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ನಾಯ್ಕ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಯನ್ನು ದೊರಕಿಸಬೇಕು. ನೆಲ, ಜಲ, ಭಾಷೆಗಳಿಗಾಗಿ ಜಗಳವಾಡುವುದನ್ನು ಮರೆತು ನಾವೆಲ್ಲರೂ ಭಾರತೀಯರು ಎಂಬುದನ್ನು ಮನಗೊಳ್ಳುವ ಅವಶ್ಯಕತೆಯಿದೆ ಎಂದರು. ಗುರುಪ್ರಸಾದ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ನಾರಾಯಣ ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಜಿ.ಎಸ್.ಹೆಗಡೆ, ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ಎಚ್.ಆರ್.ನಾಯ್ಕ, ಉದ್ಯಮಿ ಜಿತೇಂದ್ರ ದೀವಗಿ ಮತ್ತಿತರರು ವೇದಿಕೆಯಲ್ಲಿದ್ದರು.
ಪ್ರೌಢಶಾಲೆಯ ಅಭಿವೃದ್ಧಿಗಾಗಿ ನೆರವು ನೀಡಿದ ದಾನಿಗಳನ್ನು ಶ್ರೀಗಳು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪ್ರಕಾಶ ಪಂಡಿತ ಸಂಪಾದಕತ್ವದಲ್ಲಿ ರಚಿಸಿದ ಸುವರ್ಣ ಸೌರಭ ಹಸ್ತಪತ್ರಿಕೆಯನ್ನು ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಅರುಣ ಉಭಯಕರ ಸ್ವಾಗತಿಸಿದರು. ಪರಿಜ್ಞಾನ ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಕೆ.ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಾಧ್ಯಾಪಕ ಎಂ.ಟಿ.ಗೌಡ ವರದಿ ವಾಚಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಪರಿಜ್ಞಾನ ಪೂರ್ವವಿದ್ಯಾರ್ಥಿಗಳ ಸಂಘದಿAದ ಶ್ರೀಗಳ ಪಾದುಕಾಪೂಜೆ ನೆರವೇರಿಸಲಾಯಿತು. ಶಿಕ್ಷಕರಾದ ಮಹಾಲಕ್ಷ್ಮೀ ಭಟ್ಟ ಹಾಗೂ ರಾಜು ಲಮಾಣಿ ನಿರೂಪಿಸಿದರು. ಚಿತ್ರಾಪುರ ಮಠದ ಶಿಷ್ಯರು ವೇದಘೋಷ ಹಾಡಿದರು. ವಿದ್ಯಾರ್ಥಿನಿ ನಾಗಶ್ರೀ ನಾಯ್ಕ ಸಂಗಡಿಗರು ಪ್ರಾರ್ಥಿಸಿ, ಸ್ವಾಗತ ಗೀತೆ ಹಾಡಿದರು. ಉಪನ್ಯಾಸಕ ಆನಂದ ನಾಯಕ ವಂದಿಸಿದರು. ಸಂಜೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

error: