October 4, 2024

Bhavana Tv

Its Your Channel

ಭಟ್ಕಳ ಮುರ್ಡೇಶ್ವರದ ಬೀನಾ ವೈದ್ಯ ಶಾಲೆಯ ವಿದ್ಯಾರ್ಥಿ ಹೃಷಿಕೇಶ ಪತಿಹಾರ ಅಗ್ರೀ ರೋಬೋ ತಯಾರಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

ಮುಡೇಶ್ವರ ; ಈ ಆಗ್ರೀ ರೋಬೋವು ಡೀಸೆಲ್ / ಪೆಟ್ರೋಲ್ ನ ಅವಶ್ಯಕತೆ ಇಲ್ಲದೆ,ಪರಿಸರ ಮಾಲಿನ್ಯ ರಹಿತವಾದ, ನಿಸರ್ಗದ ಸೌರಶಕ್ತಿಯನ್ನು ಬಳಸಿಕೊಂಡು ರಿಮೋಟ್ನ ಮೂಲಕ ಕಾರ್ಯನಿರ್ವಯಿಸಬವುದಾಗಿದೆ . ಇದನ್ನು ಅತಿ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾಗಿದೆ. ರೊಬೊವು ಒಂದೇ ಸಮಯದಲ್ಲಿ ಹೊಲವನ್ನು ಉಳುವ, ನೀರು ಹಾಯಿಸುವ ಹಾಗೂ ಬೀಜ ಬಿತ್ತುವ ಕೆಲಸವನ್ನು ಒಟ್ಟಿಗೆ ನಿರ್ವಯಿಸುವ ಮೂಲಕ ರೈತರ ಸಮಯ ಮತ್ತು ಮ್ಯಾನ್ ಪವ???ನ್ನು ಕಡಿಮೆ ಮಾಡಿ ರೈತ ಸ್ನೇಹಿಯಾಗಿ ಕಾರ್ಯ ನಿರ್ವಯಿಸುತ್ತದೆ .
ಶಿಕ್ಷಕರಾದ ಪದ್ಮ ಪೂಜಾರಿ ಹಾಗೂ ರಾಘವೇಂದ್ರ ನಾಯ್ಕ ಸಾಧನೆಗೆ ಮಾರ್ಗದರ್ಶನ ನೀಡಿದ್ದಾರೆ ,ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಮಂಕಾಳ ಎಸ್ ವೈದ್ಯ ಹಾಗೂ ಪುಷ್ಪಲತಾ ವೈದ್ಯ, ಪ್ರಾಂಶುಪಾಲರಾದ ಜಗನಾಥ ಚಿನೇಕರ್ ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

error: