September 14, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಹಾಡಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

ಹೊನ್ನಾವರ ತಾಲೂಕಿನ ಕಟ್ಟ ಕಡೆಯ ಪಂಚಾಯಿತ್‌ನ ತುತ್ತತುದಿಯಲ್ಲಿರುವ ಹಾಡಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೧೩-೦೨-೨೦೨೦ರಂದು ವಾರ್ಷಿಕ ಸ್ನೇಹ ಸಮ್ಮೇಳನ ಬಹಳ ಸಡಗರದಿಂದ ನೆರವೇರಿತು.
ವಿದ್ಯಾರ್ಥಿಗಳು ಯಕ್ಷಗಾನದ ನೃತ್ಯ ಹಾಗೂ ಭರತನಾಟ್ಯದ ಮೂಲಕ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಗಣ್ಯರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹ ಶಿಕ್ಷಕರಾದ ಮಹೇಶರವರು ಶಾಲಾ ವಾರ್ಷಿಕ ವರದಿ ವಾಚಿಸಿದರು. ಪಠ್ಯ ಹಾಗೂ ಪಠ್ಯೆತರ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು, ಭೂದಾನಿಗಳನ್ನು, ಶಿಕ್ಷಕರನ್ನು ಹಾಗೂ ವರ್ಷದ ಆದರ್ಶ ವಿದ್ಯಾರ್ಥಿಯನ್ನು ಸಿಲೆಕ್ಟ್ ಫೌಂಡೇಶನ್ (ರಿ.) ಹಾಗೂ ಊರ ನಾಗರಿಕರವತಿಯಿಂದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿ ಜಿ. ಎ. ನಾಯ್ಕರವರು ಮಾತನಾಡಿ ಏಲ್ಲಾ ಧರ್ಮಕ್ಕೂ ಅದರದೆ ಆದ ಪವಿತ್ರ ಸ್ಥಳವಿರುತ್ತದೆ. ಆದರೆ ಶಾಲೆ ಎಲ್ಲಾ ಧರ್ಮದವರಿಗೂ ಅತ್ಯಂತ ಪವಿತ್ರವಾಗಿದ್ದು ಅದು ವಿದ್ಯಾಮಂದಿರವೇ ಆಗಿದೆ ಎಂದರು. ಇಂತಹ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪರಮಪೂಜ್ಯ ಶ್ರಿ ಮಾರುತಿ ಗುರೂಜಿಯವರು ತನ್ನ ಶಿಷ್ಯರು ಎಂಬುವುದನ್ನು ಬಹಳ ಅಭಿಮಾನದಿಂದ ಹೇಳಿಕೊಂಡರು. ವೇದಿಕೆಯ ಮೇಲಿದ್ದ ಗಣ್ಯರು ತಮ್ಮ ಮಾತುಗಳಲ್ಲಿ ಕುಗ್ರಾಮದಲ್ಲಿದ್ದರು ಶಾಲೆಯ ಕ್ರಿಯಾಶೀಲತೆಯನ್ನು, ಶಿಕ್ಷಕರ ಪ್ರಾಮಾಣಿಕ ಪ್ರಯತ್ನವನ್ನು ಹಾಗೂ ಮಾರುತಿ ಗುರೂಜಿಯವರ ಸಹಕಾರ ಮತ್ತು ಮಾರ್ಗದರ್ಶನವನ್ನು ಪ್ರಶಂಸಿಸಿದರು.
ಶಿಕ್ಷಣ ಇಲಾಖೆಯ ಸಿಬ್ಬಂದಿಗಳಾದ ಎನ್. ಎಸ್. ನಾಯ್ಕ, ಸತೀಶ ನಾಯ್ಕ, ಶ್ರೀಮತಿ ಸಾಧನಾ ಬರ್ಗಿ, ರತ್ನಾಕರ ದೇಶಭಂಡಾರಿ, ಪಿ. ಆರ್. ನಾಯ್ಕ ಹಾಗೂ ಇತರರು ಮತ್ತು ನಗರಬಸ್ತಿಕೇರಿ ಗ್ರಾಮ ಪಂಚಾಯಿತ್‌ನ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣಾ ಶಾಸ್ತಿç, ಎಸ್. ಡಿ. ಎಮ್. ಸಿ. ಅಧ್ಯಕ್ಷರಾದ ಗಣಪತಿ ಮರಾಠಿ, ಸ್ಥಳ ದಾನಿಗಳಾದ ಬಾಲು ಮರಾಠಿ, ವನವಾಸಿ ಕಲ್ಯಾಣ ಸಂಸ್ಥೆಯ ಶ್ರೀಧರ ಸಾಲೆಹಕ್ಕಲ್, ವಿಟ್ಟಲ ನಾಯ್ಕ, ಕೃಷ್ಣ ಮರಾಠಿ, ಗಣಪತಿ ಜಿ. ಮರಾಠಿ, ಶುಕ್ರು ಹಳ್ಳೇರ, ಮಂಜುನಾಥ ಹಳ್ಳೇರ, ನಾರಾಯಣ ನಾಯ್ಕ ಉಪಸ್ಥಿತರಿದ್ದರು.

ಸಿಲೆಕ್ಟ್ ಫೌಂಡೇಶನ್‌ನ ಯೋಜನಾಧಿಕಾರಿ ಗಣಪತಿ ಹೆಗಡೆಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು, ಸಹಶಿಕ್ಷಕರಾದ ಶ್ರೀ ಕೃಷ್ಣ ಹಳ್ಳೇರ ಸ್ವಾಗತಿಸಿದರು. ಸಹಶಿಕ್ಷಕಿಯಾದ ಕುಮಾರಿ ಅಕ್ಷತಾ ನಾಯ್ಕ ವಂದಿಸಿದರು. ಸರಳವಾಗಿ ಆಯೋಜನೆಗೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಏಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಮುಖ್ಯ ಸಮಾಜವಾಹಿನಿಯಿಂದ ದೂರದಲ್ಲಿರುವ ಹಾಡಗೇರಿಯನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಬೇಕೆನ್ನುವ ಸಾಮಾಜಿಕ ಕಳಕಳಿಯಿಂದ ಮೂಲಭೂತ ಸೌಕರ್ಯ ಹಾಗೂ ಶಿಕ್ಷಕರ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಹಾಡಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜುಲೈ ೨೦೧೬ ರಲ್ಲಿ ಸಿಲೆಕ್ಟ್ ಫೌಂಡೇಶನ್ (ರಿ.) ಶ್ರಿಕ್ಷೇತ್ರ ಬಂಗಾರಮಕ್ಕಿ ಸಂಸ್ಥೆಯ ಮೂಲಕ ದತ್ತು ಪಡೆದು ಹಲವಾರು ಮೂಲಭೂತ ಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಪಟ್ಟಿ-ಪುಸ್ತಕ-ಸಮವಸ್ತçಗಳನ್ನು ವಿತರಿಸಿ ಆರ್ಥಿಕವಾಗಿಯೂ ಸಹಾಯ ಮಾಡುತ್ತಾ ಬಂದಿದ್ದಾರೆ.

error: