May 23, 2024

Bhavana Tv

Its Your Channel

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಜನಪರ ಅಭಿವೃದ್ದಿ ಕಾರ್ಯ ಮರೆತು ಖಾತೆ ಹಂಚಿಕೆಯಲ್ಲಿಯೆ ಕಾಲಹರಣ ಮಾಡುತ್ತಿದೆ ಬಾಗಲಕೋಟೆ ಜಿಲ್ಲಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.

ಶನಿವಾರ ತಾಲೂಕಾ ಪಕ್ಷಾತೀತ ಮತ್ತು ಜಾತ್ಯಾತೀತ ವೇದಿಕೆ ಹಮ್ಮಿಕೊಂಡ ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕುಗಳಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಗುಂಡಾಗಿರಿಯನ್ನು ವಿರೋಧಿಸಿ ತಾಲೂಕಾಡಳಿತ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂಜಯ್ಯನಮಠ ಮಾತನಾಡುತ್ತ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಅವರ ಬಿಜೆಪಿ ಪಕ್ಷದ ಬೆಂಬಲಿಗರಿಗೆ ಮಾತ್ರ ತಾಲೂಕಾಡಳಿತ ಎಜೆಂಟರಾಗಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಹುನಗುಂದ ತಾಲೂಕಿನ ಮರೋಳ ಗ್ರಾಮದಲ್ಲಿ ಶಾಸಕರ ಬೆಂಬಲಿಗರು ಕರ್ತವ್ಯ ನಿರತ ಕೆಎಸ್‌ಆರ್‌ಟಿಸಿ ನಿರ್ವಾಹಕ ಮುರುಗೇಶ ಹುಲ್ಲಳ್ಳಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ನಡೆದ ಗುಂಡಾಗಿರಿಯನ್ನು ಪಕ್ಷಾತೀತ ವೇದಿಕೆ ಖಂಡಿಸುತ್ತದೆ. ಈತನಕ ಪ್ರಮುಖ ಆರೋಪಿಗಳನ್ನು ಪೊಲಿಸ್ ಇಲಾಖೆ ಬಂಧಿಸದಿರುವದು ಯಾವ ನ್ಯಾಯ? ನಾಗರಿಕ ಸಮೂದಾಯ ಪ್ರಶ್ನಿಸುವಂತಾಗಿದೆ ಎಂದರು.
ಅವಳಿ ತಾಲ್ಲೂಕಿನಲ್ಲಿ ಶಾಂತಿ ಸ್ಥಾಪನೆಗಾಗಿ ತಾಲ್ಲೂಕು ಮತ್ತು ಜಿಲ್ಲಾಡಳಿತ ಕೂಡಲೆ ಪ್ರಮುಖ ಆರೋಪಿಗಳನ್ನು ವಾರದೊಳಗೆ ಬಂಧಿಸಬೇಕು. ತಪ್ಪಿದಲ್ಲಿ ಉಗ್ರವಾದ ಹೋರಾಟದೊಂದಿಗೆ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುವದೆಂದು ನಂಜಯ್ಯನಮಠ ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಕ್ಷೇತ್ರದಲ್ಲಿ ಅಭಿವೃದ್ದಿ ನಡೆಸದೆ ಕೈ ಕಟ್ಟಿಕೊಂಡು ಕುಳಿತ ಶಾಸಕ ದೊಡ್ಡನಗೌಡರು ಮತ್ತು ಪೊಲಿಸರು ಬಿಜೆಪಿ ಪಕ್ಷದ ಕಾರ್ಯಕರ್ತರು ಮಾಡುತ್ತಿರುವ ದೌರ್ಜನ್ಯ ಮತ್ತು ಗುಂಡಾಗಿರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಜನಸಾಮಾನ್ಯರ ಮಧ್ಯೆ ವಿಷ ಬೀಜ ಬಿತ್ತಿ ವೈಷಮ್ಯ ಜೀವನ ನಡೆಯುವಂತೆ ಮಾಡುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರು ಜೀವನ ನಡೆಸಲು ಭಯಭೀತರಾಗಿದ್ದಾರೆ. ಇದಕ್ಕೆ ನಾವಲ್ಲೆ ಅಂಜುವದಿಲ್ಲ. ನೌಕರರು ಜನಪ್ರತಿನಿಧಿಗಳ ಕೈಚೀಲವಾಗದೆ ತಮ್ಮ ಸೇವಾವಧಿಯಲ್ಲಿ ಒಗ್ಗಟ್ಟಾಗಿ ನ್ಯಾಯಯುತವಾಗಿ ಜನಸಾಮಾನ್ಯರ ಸೇವೆ ಮಾಡುವಂತೆ ಕಾಶಪ್ಪನವರ ಹೇಳಿದರು.

ಜಿಲಾ ್ಲ ಕರವೆ ಅಧ್ಯಕ್ಷ ರಮೇಶ ಬದ್ನೂರ, ಶರಣಪ್ಪ ಅಮಲಿಹಾಳ ಮಾತನಾಡಿದರು. ರಾಜಕುಮಾರ ಬಾದವಾಡಗಿ ಮನವಿ ಓದಿದರು. ಶಿರಸ್ತೇದಾರ ಎಮ್.ಆರ್. ಹೆಬ್ಬಳ್ಳಿ ಮನವಿ ಸ್ವೀಕರಿಸಿದರು.
ನಿರ್ವಾಹಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ವಿರೋಧಿಸಿ ನಗರದ ಬಸವ ಮಂಟಪದಿAದ ಪ್ರತಿಭಟನಾ ರ‍್ಯಾಲಿಯು ಚನ್ನಮ್ಮ ವೃತ್ತ, ಲಿಂಗದಕಟ್ಟಿ, ಸಂಗಮೇಶ್ವರ ದೇವಸ್ಥಾನ ಆಝಾದ ನಗರ, ಟಿಪ್ಪು ವೃತ್ತ, ಅಂಬೇಡ್ಕರ ಕಾಲೋನಿ. ಮಹಾಂತ ವೃತ್ತ ಮತ್ತು ಬಸ್ ನಿಲ್ದಾಣ ಮಾರ್ಗವಾಗಿ ತಹಶೀಲ್ದಾರ ಕಚೇರಿ ತಲುಪಿತು. ಪ್ರತಿಭಟನೆ ಪ್ರಾರಂಭದಿAದ ಮುಕ್ತಾಯದವರೆಗೂ ಸಿಪಿಐ ಅಯ್ಯನಗೌಡ ಪಾಟೀಲ ನೇತೃತ್ವದಲ್ಲಿ ಪಿಎಸ್‌ಐ ಪುಂಡಲೀಕ ಪಟಾತರ ಪೊಲಿಸ್ ಪಹರೆ ಒದಗಿಸಿದ್ದರು.

error: