May 7, 2024

Bhavana Tv

Its Your Channel

ಸಂಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಾಗಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ

ಕಾರವಾರ: ಕೋವಿಡ್-2019ರ ಲಾಕ್ ಡೌನ್ ನಂತರ ರಾಜ್ಯದಲ್ಲಿ ಮಕ್ಕಳ ಮೇಲೆ ದೈಹಿಕ, ಮಾನಸಿ ಹಾಗೂ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದೆ. ಇಂತಹ ಮಕ್ಕಳ ಪಾಲನೆ, ಪೋಷಣೆ ಮತ್ತು ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಸಹಾಯವನ್ನು ಪಡೆದುಕೊಳ್ಳಬೇಕು ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಮಾರುತಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಕ್ಕಳ ಸಹಾಯವಾಣಿಯು ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಒಂದು ಮುಖ್ಯವಾದ ಯೋಜನೆಯಾಗಿದ್ದು, 18 ವರ್ಷದ ಒಳಗಿನ ಎಲ್ಲ ಮಕ್ಕಳ ಸಮಸ್ಯಗಳಿಗೆ ಸ್ಪಂದಿಸಲು ಭಾರತದಾದ್ಯಂತ ಇರುವ ಎಕೈಕ ಸಹಾಯವಾಣಿ ಆಗಿದೆ. ಇದು ಉಚಿತ ಕರೆಯಾಗಿದ್ದು, ಕರೆಮಾಡಿದವರ ಮಾಹಿತಿ ಗೌಪ್ಯವಾಗಿ ಇಡಲಾಗುತ್ತದೆ.

ದಿನದ 24 ಗಂಟೆಗಳ ಹಗಲು ಮತ್ತು ರಾತ್ರಿ ಸೇವೆಯನ್ನು ಒದಗಿಸುತ್ತಿದೆ, ಲಾಕ ಡೌನ್ ಸಮಯದಲ್ಲೂ ಕಾರ್ಯನಿರ್ವಹಿಸಿ ಮಕ್ಕಳನ್ನು ತೊಂದರೆಯಿಂದ ಕಾಪಾಡಿದ್ದಾರೆ. ಬಾಲ್ಯವಿವಾಹ, ಬಾಲ ಕಾರ್ಮಿಕ ಒಳಗಾದ ಮಕ್ಕಳು, ಭಿಕ್ಷಾಟನೆಗೆ ತೊಡಗಿದಲ್ಲಿ, ಕಾಣೆಯಾದಲ್ಲಿ, ಲೈಂಗಿಕ ದೌರ್ಜನ್ಯ, ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಹಾಗೂ ಆಪ್ತಸಮಾಲೋಚನೆ ಅವಶ್ಯಕತೆ ಜೊತೆಯಲ್ಲಿ 18 ವರ್ಷದೊಳಗಿನ ಮಕ್ಕಳ ಯಾವುದೇ ಸಮಸ್ಯೆ ಇದ್ದರು ಉಚಿತ ಕರೆಯಾದ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಿ ಹಾಗೂ ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಮಕ್ಕಳ ಸಹಾಯವಾಣಿಯೊಂದಿಗೆ ಕೈ ಜೋಡಿಸಿ ಎಂದು ತಿಳಿಸಲಾಗಿದೆ

error: