April 27, 2024

Bhavana Tv

Its Your Channel

ಬೋಟ್ ಕೆಲಸಗಾರರನ್ನು ಕರೆತರುವಾಗ ನ್ಯೂನತೆ ಉಂಟಾದರೆ ಬೋಟ್ ಮಾಲೀಕರೇ ನೇರ ಹೊಣೆ

ಕಾರವಾರ: ಜಿಲ್ಲೆಯಲ್ಲಿ ಪ್ರಸ್ತುತ ಮೀನುಗಾರಿಕೆ ವರ್ಷದ ಪ್ರಾರಂಭಕ್ಕೆ ಮುನ್ನಾ ಮೀನುಗಾರಿಕೆ ಬೋಟನಲ್ಲಿ ದುಡಿಯುವವರನ್ನು ಕರೆತರುವಾಗ ಕಡ್ಡಾಯವಾಗಿ ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕೆಂದು ಮೀನುಗಾರಿಕೆ ಇಲಾಖೆಯು ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ.

ಹೊರರಾಜ್ಯದ ಮೀನುಗಾರರನ್ನು ಕರೆತರುವಾಗ ಕಡ್ಡಾಯವಾಗಿ ಮೀನುಗಾರಿಕೆ ಇಲಾಖೆ, ಪೋಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು, ಹೊರರಾಜ್ಯದ ಮೀನುಗಾರಿಕೆ ಕಾರ್ಮಿಕರನ್ನು (ಕಲಾಸಿಗಳು) ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಪಡಿಸಿ ನಿಗಧಿತ ಅವಧಿಯ ಕ್ವಾರಂಟೈನ್‍ಗೆ ಒಳಪಡಿಸಬೇಕು ಮತ್ತು ಹೊರರಾಜ್ಯದ ಎಲ್ಲಾ ಮೀನುಗಾರರು ಕಡ್ಡಾಯವಾಗಿ ಗುರುತಿನ ದಾಖಲಾತಿಗಳನ್ನು ಬೋಟನಲ್ಲಿ ಇರಿಸಿಕೊಳ್ಳತಕ್ಕದ್ದು ಹಾಗೂ ಇಲಾಖೆಗೆ ಒಂದು ಪ್ರತಿಯನ್ನು ನೀಡಬೇಕು ಹಾಗೂ ಹೊರರಾಜ್ಯದ ಮತ್ತು ಇತರೆ ಬೋಟನಲ್ಲಿ ದುಡಿಯುವವರ ಎಲ್ಲಾ ಕಾರ್ಮಿಕರ ರೀತಿಯ ಆರೋಗ್ಯದ ಮತ್ತು ಇತರೆ ಸಂಪೂರ್ಣ ಜವಾಬ್ದಾರಿಯನ್ನು ಬೋಟ್ ಮಾಲೀಕರೇ ನಿರ್ವಹಿಸಬೇಕು. ಅಲ್ಲದೇ ಈ ವಿಷಯಗಳನ್ನು ಪಾಲಿಸದೆ ನ್ಯೂನತೆ ಉಂಟಾದಲ್ಲಿ ಬೋಟ್ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

ಕೋವಿಡ್-19, ರೋಗಾಣು ಹರಡುವಿಕೆ ಹಿನ್ನೆಲೆಯಲ್ಲಿ ಮೀನುಗಾರಿಕೆ ಬಂದರುಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೆ ಸೀಮಿತವಾಗುವಂತೆ ಮೀನುಗಾರರು, ಬೋಟ್ ಮಾಲೀಕರು, ಮೀನುವ್ಯಾಪಾರಸ್ಥರು, ಮೀನುಗಾರಿಕೆ ಕಾರ್ಮಿಕರು ಹೊರತು ಪಡಿಸಿ ಉಳಿದ ಯಾವುದೇ ಸಾರ್ವಜನಿಕರುಗಳಿಗೆ ಪ್ರವೇಶ ನಿರ್ಬಂಧಿಸಿದ್ದು, ಬಂದರು ಪ್ರದೇಶದಲ್ಲಿ ಒಳ ಪ್ರವೇಶಿಸಲು ಮೀನುಗಾರಿಕೆ ಇಲಾಖೆ ಅಥವಾ ಮೀನುಗಾರರ ಬೋಟ್ ಯುನಿಯನ್‍ರವರ ಮುಖಾಂತರ ಅಧಿಕೃತ ಪಾಸ್ ಪಡೆಯಬೇಕು ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

error: