May 6, 2024

Bhavana Tv

Its Your Channel

ಕಾರ್ಮಿಕರಿಗೆ ನೀಡಲಾಗುವ ಸಹಾಯಧನ ವಿಳಂಬದ ಸರಕಾರದ ನೀತಿ ಖಂಡನಾರ್ಹ. ಈ ದಿಶೆಯಲ್ಲಿ ಮುಖ್ಯ ಮಂತ್ರಿಗಳು ಕಾರ್ಮಿಕ ಇಲಾಖೆಯ ನಿರ್ಲಕ್ಷಕ್ಕೆ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಶಿರಸಿ: ಕೋರೋನಾ ಕೋವಿಡ್-೧೯ ಸಂದರ್ಭದಲ್ಲಿ ಆರ್ಥೀಕ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ರೂಪಾಯಿ ೫ ಸಾವಿರ ಸಹಾಯಧನ ಘೋಷಿಸಿ, ೧೨೦ ದಿನಗಳಾದರೂ ೩೭,೪೮೮ ನೋಂದಾಯಿತ ಕಾರ್ಮಿಕರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಾಯಧನ ತಲುಪಿಲ್ಲ.

 ಕಾರ್ಮಿಕ ಇಲಾಖೆ ನೀಡಿದ ದಾಖಲೆಯಲ್ಲಿ ಸದ್ರಿ ಅಂಕಿ-ಅAಶ ಪ್ರಸ್ತಾಪಿತವಾಗಿದ್ದು, ಕಾರ್ಮಿಕ ಇಲಾಖೆ ನೋಂದಾಯಿತವಲ್ಲದ ಎನ್,ಆರ್,ಇ,ಜಿ ಮತ್ತು ಇನ್ನಿತರರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿAದ ನೇರವಾಗಿ ೨೬,೩೮೯ ಉತ್ತರ ಕನ್ನಡ ಜಿಲ್ಲೆಯ ಫಲಾನುಭವಿಗಳಿಗೆ ಹಣ ಜಮಾ ಮಾಡಿರುವುದು ಆಶ್ಚರ್ಯಕರ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

 ಇತ್ತಿಚಿಗೆ ಕಾರ್ಮಿಕ ಇಲಾಖೆ ನೀಡಿದ ಅಧೀಕೃತ ದಾಖಲೆಯ ಆಧಾರದ ಮೇಲೆ ಮಾರ್ಚ ೨೯-೨೦೨೦ ರವರೆಗೆ ನೋಂದಾಯಿತ ಕಾರ್ಮಿಕರು ಕಾರವಾರದಲ್ಲಿ ೨,೧೪೫ ಇದ್ದರೆ, ಅವುಗಳಲ್ಲಿ ಸಹಾಯಧನ ಪಡೆದಿರುವರು ೧,೨೦೮. ಅದರಂತೆ ಅಂಕೋಲಾ ೨,೨೭೯ ನೋಂದಾಯಿತ ಕಾರ್ಮಿಕರಲ್ಲಿ ೧,೩೯೩ ಸಹಾಯಧನ ಪಡೆದವರು, ಕುಮಟ ೮,೦೬೮ ನೋಂದಾಯಿತ ಕಾರ್ಮಿಕರಲ್ಲಿ ೨,೬೪೪ ಸಹಾಯಧನ ಪಡೆದವರು, ಹೋನ್ನಾವರ ೯,೬೭೨ ನೋಂದಾಯಿತ ಕಾರ್ಮಿಕರಲ್ಲಿ ೪,೯೪೩ ಸಹಾಯಧನ ಪಡೆದವರು, ಭಟ್ಕಳ ೧೧,೩೦೮ ನೋಂದಾಯಿತ ಕಾರ್ಮಿಕರಲ್ಲಿ ೬,೫೨೩ ಸಹಾಯಧನ ಪಡೆದವರು, ಸಿದ್ಧಾಪುರ ೩,೩೭೯ ನೋಂದಾಯಿತ ಕಾರ್ಮಿಕರಲ್ಲಿ ೮೬೭ ಸಹಾಯಧನ ಪಡೆದವರು, ಶಿರಸಿ ೨,೫೨೪ ನೋಂದಾಯಿತ ಕಾರ್ಮಿಕರಲ್ಲಿ ೭೮೮ ಸಹಾಯಧನ ಪಡೆದವರು, ಮುಂಡಗೋಡ ೨,೬೪೯ ನೋಂದಾಯಿತ ಕಾರ್ಮಿಕರಲ್ಲಿ ೮೬೯ ಸಹಾಯಧನ ಪಡೆದವರು, ಯಲ್ಲಾಪುರ ೩,೫೬೭ ನೋಂದಾಯಿತ ಕಾರ್ಮಿಕರಲ್ಲಿ ೧,೬೯೬ ಸಹಾಯಧನ ಪಡೆದವರು, ಹಳಿಯಾಳ ೧೪,೪೯೨ ನೋಂದಾಯಿತ ಕಾರ್ಮಿಕರಲ್ಲಿ ೪,೦೧೭ ಸಹಾಯಧನ ಪಡೆದವರು, ಜೋಯಿಡಾ ಮತ್ತು ದಾಂಡೇಲಿ ೪,೮೩೮ ನೋಂದಾಯಿತ ಕಾರ್ಮಿಕರಲ್ಲಿ ೨,೯೩೫ ಸಹಾಯಧನ ಪಡೆದವರು, ಎಂಬ ಕುರಿತು ದಾಖಲೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಒಟ್ಟು ೬೫,೩೭೧ ನೋಂದಾಯಿತ ಕಾರ್ಮಿಕರಲ್ಲಿ ೨೭,೮೮೩ ಕಾರ್ಮಿಕರಿಗೆ ಮಾತ್ರ ಸಹಾಯಧನ ತಲುಪಿರುವ ಕುರಿತು ಕಾರ್ಮಿಕ ಇಲಾಖೆಯ ದಾಖಲೆಯಲ್ಲಿ ಗೋಚರಿಸಲ್ಪಟ್ಟಿದ್ದು, ಇಲಾಖೆ ನೀಡಿದ ಅಂಕೆ-ಸAಖ್ಯೆ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ ೪೨.೬೫ ರಷ್ಟು ಮಾತ್ರ ಕಾರ್ಮಿಕರಿಗೆ ಸಹಾಯಧನ ದೊರೆತಿರುವುದು ವಿಷಾದಕರ ಎಂದು ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
error: