May 19, 2024

Bhavana Tv

Its Your Channel

ಭಟ್ಕಳದಲ್ಲೀಗ ಅಣಬೆ ದರ್ಬಾರು; ಕೊರೊನಾ ಆತಂಕ ದಲ್ಲಿ ನಡುವೆ ಮಾರುಕಟ್ಟೆಗೆ ಕಾಲಿಟ್ಟ ಅಣಬೆ.

ಭಟ್ಕಳ: ಭಟ್ಕಳದ ಮಲ್ಲಿಗೆಯಂತೆ ಭಟ್ಕಳ ಹಾಗೂ ಆಸುಪಾಸಿನ ಸ್ಥಳೀಯವಾಗಿ ಹೆಗ್ಗಲಿ ಎಂದು ಕರೆಯಲಾಗುವ ರುಚಿಕಟ್ಟಾದ ಅಣಬೆಗಳಿಗೆ ವಿಶೇಷ ಕಿಮ್ಮತ್ತಿದೆ. ಬೇರೆ ತಾಲೂಕುಗಳ (ಹೊನ್ನಾವರದಿಂದಾಚೆ) ಅಣಬೆಗಳೆಂದು ಗೊತ್ತಾದ ಕೂಡಲೇ ಇಲ್ಲಿ ಬೇಡಿಕೆಯನ್ನು ಕಳೆದುಕೊಳ್ಳುತ್ತವೆ. ಒಂದೆಡೆ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಏರಿಕೆ ಕಾಣುತ್ತಿದ್ದು ಹಳ್ಳಿಗಳೆಲ್ಲ ಕೊರೊನಾಮಯವಾಗುತ್ತ ಸಾಗಿದೆ ತಿಂಗಳ ಹಿಂದೆಯಷ್ಷೇ ಪೇಟೆಗೆ ಬರಲು ಹೆದರುತ್ತಿದ್ದ ಹಳ್ಳಿಗರು ಮನೆ ಬಾಗಿಲಿಗೆ ಕೊರೊನಾ ಕಾಲಿಡುತ್ತಿದ್ದಂತೆಯೇ ನಿಧನವಾಗಿ ಹಳ್ಳಿಯಿಂದ ಆಚೆ ಹೆಚ್ಚೆ ಇಡುವ ಧೈರ್ಯ ತೋರುತ್ತಿದ್ದಾರೆ. ಇದೀಗ ಕಾಡಿನ ಅಣಬೆಯೂ ಪಟ್ಟಣದಲ್ಲಿ ಮಾರಾಟಕ್ಕೆ ಲಭ್ಯವಾಗುತ್ತಿವೆ.
ಪೌಷ್ಠಿಕಾಂಶದ ಕಾರಣದಿಂದಾಗಿ ಇದರ ಮಹತ್ವ ಇನ್ನಷ್ಟು ಹೆಚ್ಚಿದೆ. ಮಸಾಲಾ, ಫ್ರೈ, ಬಿರ‍್ಯಾನಿಗೂ ಅಣಬೆ ಸೈ ಎನ್ನಿಸಿಕೊಳ್ಳುತ್ತದೆ. ವಿಶೇಷವಾಗಿ ನವಾಯತ ಸಮುದಾಯದ ಜನರು ಹೆಗ್ಗಲಿಗಾಗಿ ಮುಗಿಬೀಳುತ್ತಿದ್ದಾರೆ. ಅಣಬೆ ಖಾದ್ಯಗಳು ಭಟ್ಕಳದಿಂದ ದೂರದ ಮುಂಬೈ, ದುಬೈಗೂ ರವಾನೆ ಯಾಗುತ್ತದೆ. ಮೊದಲೆಲ್ಲ ೧೦೦-೨೦೦ ರುಪಾಯಿಗೆ ಸಿಗುತ್ತಿದ್ದ ಅಣಬೆಗಳ ದರ ಆಗಸಕ್ಕೆ ನೆಗೆದಿದೆ.
ಈಗ ೧೦೦ ಅಣಬೆಗೆ 350-650 ರುಪಾಯಿಯವರೆಗೂ ಬೇಡಿಕೆ ಇರುವುದು ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ಅಣಬೆಗಳ ದರ್ಬಾರಿಗೆ ಆಕರ್ಷಿತರಾಗಿ ದಲ್ಲಾಳಿಗಳು ಹುಟ್ಟಿಕೊಂಡಿದ್ದಾರೆ. ಕೆಲವರು ಕೃಷಿಕರಿಂದ ಅಣಬೆಗಳನ್ನು ಸಂಗ್ರಹಿಸಲು ಹಳ್ಳಿಗಳತ್ತ ಪ್ರಯಾಣ ಬೆಳೆಸಿದ್ದರೆ, ಇನ್ನು ಕೆಲವರು ಮಾರ್ಗ ಮಧ್ಯೆ ಕಾದು ಅಣಬೆಗಳನ್ನು ಪಡೆದು ಕನಿಷ್ಠ ಎಂದರೂ ಪ್ರತಿ ದಿನ ರು.೫೦೦ ರಿಂದ ೨೦೦೦ ರುಪಾಯಿಯವರೆಗೂ ಲಾಭ ಗಳಿಸುತ್ತಿದ್ದಾರೆ.

error: