March 27, 2024

Bhavana Tv

Its Your Channel

ಬೀದಿ ನಾಟಕ ಮೂಲಕ :ಆರೋಗ್ಯದ ಬಗ್ಗೆ ಜನರಲ್ಲಿ ಅರಿವು.

ಕಾಗವಾಡ ವರದಿ :

ನೊವಾರ್ಟಿಸ್ ಅರೋಗ್ಯ ಪರಿವಾರ ಸಂಸ್ಥೆ ಮತ್ತೆ ಜೆ. ಈ. ಸಂಸ್ಥೆಯ ಕೆ. ಎ. ಲೋಕಾಪೂರ ಡಿಗ್ರಿ ಕಾಲೇಜು ಅಥಣಿ ಇವರ ಸಂಯುಕ್ತಾಶ್ರಯದಲ್ಲಿ ದಿ. 27 ರಂದು ಮುಂಜಾನೆ 11 ಗಂಟೆಗೆ ಆರೋಗ್ಯ ಜಾಗ್ರತಿ ಬೀದಿನಾಟಕ ಕಾಗವಾಡ ತಾಲೂಕಿನ ಐನಾಪುರದೊಳಗ ನಡೆಯಿತು.

ಕೆ. ಎ. ಲೋಕಾಪೂರ ಡಿಗ್ರಿ ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ್ರು. ದುಶ್ಚಟಗಳಿಂದ ಮುಕ್ತರಾಗಿ ಎಲ್ಲರೂ ಅರೋಗ್ಯ ಕಾಪಾಡಿಕೊಳ್ಳಬೇಕು ಅಂತಾ ನಾಟಕದ ಮೂಲಕ ತಿಳಿಸಿದ್ರು.

ನಂತರ ಶುದ್ಧಿ ಮಾಧ್ಯಮದವರೊಂದಿಗೆ ನೊವಾರ್ಟಿಸ್ ಅರೋಗ್ಯ ಪರಿವಾರ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ ಎ. ಬಿ. ಹಾದಿಮನಿ ಮಾತಾಡುತ್ತಾ ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ ಬಗ್ಗೆ ಅರಿವು ಮೂಡಿಸಲು ದಿನಾಲೂ 3ರಿಂದ 4 ಹಳ್ಳಿಗಳಲ್ಲಿ ಬೀದಿ ನಾಟಕ ಕೈಗೊಳ್ಳಲಗೇತಿ.

ಈಗಾಲೇ ನಾವು ಸವದಿ, ಸತ್ತಿ, ಶಿರಹಟ್ಟಿ, ನಂದಗಾಂವ, ಹುಲಗಬಾಳ ಗ್ರಾಮದೊಳಗೆ ಜನರನ್ನು ಒಂದೆ ಕಡೆಗೆ ಸೇರಿಸಿ, ಕಾರ್ಯಕ್ರಮ ಆಯೋಜಿಸಿ, ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗಿದೆ.

ಸ್ಥಳೀಯ ವೈದ್ಯರ ಸಹಯೋಗದಲ್ಲಿ ಫ್ರಿ ಹೆಲ್ತ್ ಕ್ಯಾಂಪ್ ಹಾಕಿಕೊಂಡು ಗ್ರಾಮೀಣ ಭಾಗದ ಜನರಿಗೆ ಆರೋಗ್ಯ (ವೈದ್ಯಕೀಯ )ಸೇವೆ ಕೊಡುವುದು ನಮ್ಮ ಸಂಸ್ಥೆಯ ಉದ್ದೇಶ ಆಗಿದೆ ಅಂತಾ ಹಾದಿಮನಿ ಅವರು ತಿಳಿಸಿದ್ರು.

ಈ ವೇಳೆಯಲ್ಲಿ ಉಪನ್ಯಾಸಕ ಎನ್. ಬಿ. ಜರೆ, ಬಿ. ಪಿ. ಗುಂಡಾ, ಅಮಿತ ಜನೊಜೆ, ವಿದ್ಯಾರ್ಥಿನಿಯರು ಇದ್ದರು.

error: