April 1, 2023

Bhavana Tv

Its Your Channel

ಮದುವೆಯಲ್ಲಿ ಭಾಗಿಯಾಗಿದ್ದ 26 ಜನರಿಗೂ ಗೃಹ ಬಂಧನ, ಮೊದಲ ದಿನವೇ ಕ್ವಾರಂಟೈನ್ ಗೆ ಒಳಗಾದ ನವ ಜೋಡಿ

ಕಾರ್ಕಳ:  ಲಾಕ್ ಡೌನ್ ಇದ್ದಾಗ್ಯೂ ದಕ್ಷಿಣ ಕನ್ನಡದಿಂದ ಕಾರ್ಕಳಕ್ಕೆ ಹೋಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ಜೋಡಿ ಮದುವೆಯಾದ ಮೊದಲ ದಿನವೇ ಹೋಂ ಕ್ವಾರಂಟೈನ್ ಗೆ ಒಳಗಾದ ಘಟನೆ ನಡೆದಿದೆ.

ಮಂಗಳೂರನಲ್ಲಿ ಖಾಸಗಿ ಉದ್ಯೋಗಿಯಾಗಿರುವ ವರ ಕಾಪು ತಾಲೂಕು ಕುತ್ಯಾರಿನಲ್ಲಿ ಮದುವೆಯಾಗಿದ್ದ, ಉಡುಪಿ ಜಿಲ್ಲಾ ಗಡಿ ಸಂಪೂರ್ಣ ಬಂದ್ ಮಾಡಿದ್ದರೂ ಒಳದಾರಿಯಿಂದ ದ.ಕ ಜಿಲ್ಲೆಯವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಬಂದು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಮದುವೆ ಮುಗಿಸಿ ಸಂಜೆ ಮನೆಗೆ ಬಂದ ಮದುಮಗನಿಗೆ ಶಾಕ್ ಕಾದಿತ್ತು. ಆಶಾ ಕಾರ್ಯಕರ್ತೆಯರು ಮನೆ ಬಳಿ ಕಾದು ಕುಳಿತಿದ್ದು, ವರನ ತಪಾಸಣೆ ನಡೆಸಿದಾಗ ವರನಲ್ಲಿ ಕೊರೊನಾ ಸೋಂಕು ಲಕ್ಷಣ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನವ ದಂಪತಿ ಹಾಗೂ ಮದುವೆಯಲ್ಲಿ ಭಾಗಿಯಾಗಿದ್ದ 26 ಜನರನ್ನು ಕ್ವಾರಂಟೈನ್ ಸೀಲ್ ಹಾಕಿ 28 ದಿನಗಳ ಗೃಹಬಂಧನಕ್ಕೆ ಒಳಪಡಿಸಲಾಗಿದೆ. ಮದುವೆಯ ಮೊದಲ ದಿನವೇ ಕ್ವಾರಂಟೈನ್ ಹಾಕಿದ್ದು, ನವಜೋಡಿಗೆ ನಿರಾಶೆಯಾಗಿದೆ.

source : ಪ್ರಗತಿವಾಹಿನಿ ಸುದ್ದಿ; 

About Post Author

error: