April 1, 2023

Bhavana Tv

Its Your Channel

ಸೇತುವೆಯಿಂದ ನದಿಗೆ ಹಾರಿ ಕಲ್ಲಡ್ಕದ ಯುವಕ ಆತ್ಮಹತ್ಯೆ

ಬಂಟ್ವಾಳ: ಬಂಟ್ವಾಳದ ಪಾಣೆಮಂಗಳೂರು ಬಳಿಯ ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನದಿಗೆ ಹಾರಿದ ಯುವಕನನ್ನು ಮೇಲಕ್ಕೆತ್ತಿ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಲ್ಲಡ್ಕ ಬಳಿಯ ಕೊಳಕೀರು ನಿವಾಸಿ ಚಂದ್ರಹಾಸ ಮೂಲ್ಯ ಇವರ ಮಗನಾದ ನಿಶಾಂತ್ (೨೮) ಎಂದು ಗುರುತಿಸಲಾಗಿದೆ. ಯುವಕ ದ್ವಿಚಕ್ರ ವಾಹನದಲ್ಲಿ ಬಂದು ಸೇತುವೆಯಿಂದ ಹಾರಿದ್ದಾನೆ ಎನ್ನಲಾಗಿದೆ.

ನಿಶಾಂತ್ ಹಾರಿದ್ದನ್ನು ಗಮನಿಸಿದ ಗೂಡಿನಬಳಿಯ ಯುವಕರಾದ ಝಿಯಾದ್ ಗೂಡಿನಬಳಿ, ಮಹೊಮ್ಮದ್ ಗೂಡಿನಬಳಿ, ಶಮೀರ್ ಗೂಡಿನಬಳಿ, ಮುಖ್ತಾರ್ ಅಕ್ಕರಂಗಡಿ, ತೌಸೀಫ್ ಗೂಡಿನಬಳಿ ಮುಂತಾದವರು ತಕ್ಷಣ ನದಿಗೆ ಧುಮುಕಿ ನದಿಯಿಂದ ಅವರನ್ನು ಮೇಲಕ್ಕೆತ್ತಿ ವಾಹನದಲ್ಲಿ ಹಾಕಿಕೊಂಡು ಬಂಟ್ವಾಳದ ಆಸ್ಪತ್ರೆಗೆ ದಾಖಲಿಸಿದರಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಝಿಯಾದ್ ಗೂಡಿನಬಳಿ ಯುವಕನೊಬ್ಬ ಸೇತುವೆಯಿಂದ ಹಾರಿದ ಎಂದು ತಿಳಿದೊಡನೆ ನಾವು ಐದು ಮಂದಿ ನದಿಗೆ ಧುಮುಕಿ ಅವರನ್ನು ದಡಕ್ಕೆ ತಂದು, ಬಾಯಿಯ ಮೂಲಕ ಕೃತಕ ಉಸಿರಾಟ ಕೊಟ್ಟು ಹಾಗೂ ಇತರ ಪ್ರಥಮ ಚಿಕಿತ್ಸೆ ಕೊಟ್ಟು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದರು.

About Post Author

error: