December 22, 2024

Bhavana Tv

Its Your Channel

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ಸಿ ಸಿ ಪಾಟೀಲ್

ಗದಗ ಜಿಲ್ಲೆ ರೋಣ ತಾಲೂಕಿನ ಮಾಳವಾಡ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಸಮುದಾಯ ಭವನ ನಿರ್ಮಾಣ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಭೂಮಿ ಪೂಜಾ ಸಮಾರಂಭವನ್ನು ಮಾಳವಾಡ ಗ್ರಾಮದಲ್ಲಿ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗೂ ಸಣ್ಣ ಕೈಗಾರಿಕಾ ಮತ್ತು ವಾರ್ತಾ ಇಲಾಖೆಯ ಸಚಿವರಾದ ಸಿ ಸಿ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು
ಅದೇ ರೀತಿ ಮಾಳವಾಡ ನವ ಗ್ರಾಮಬಸ್ ನಿಲ್ದಾಣದ ಕಟ್ಟಡ ಭೂಮಿಪೂಜೆ ನೆರವೇರಿಸಿದರು ಬಸ್ ನಿಲ್ದಾಣ ಕಾಮಗಾರಿಗೆ ಅಂದಾಜು ಮೊತ್ತ ೫ ಲಕ್ಷ ರೂಪಾಯಿ.೨ ಗುಂಟೆ ಜಾಗದಲ್ಲಿ. ನಿರ್ಮಾಣ, ಶ್ರೀಮಾರುತೇಶ್ವರ ಸಮುದಾಯ ಭವನಕ್ಕೆ ೫.ಲಕ್ಷ ಮಂಜೂರಾತಿ ನೀಡಲಾಗಿದೆ. ಅದೇ ರೀತಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ೮೧೫ ಮನೆಗಳಿಗೆ ನಳ ಜೋಡಿಗೆ ಜೆಜೆಎಮ್ ೫೭.ಲಕ್ಷ ಮಂಜೂರಾಗಿದೆ.ಮಾನ್ಯ ಸಚಿವರು ಸಭೆ ಉದ್ದೇಶಿಸಿ ಮಾತನಾಡಿ ಕರೋನಾ ಲಸಿಕೆಯನ್ನು ಸಂಪೂರ್ಣವಾಗಿ ಎಲ್ಲರೂ ಹಾಕಿಸಿಕೊಳ್ಳಲು ವಿನಂತಿ ಮಾಡಿದರು.
ಇದೇ ಸಂದರ್ಭದಲ್ಲಿ ಗುತ್ತಿಗೆದಾರರು ತಾಲೂಕ ಪಂಚಾಯತಿಯ ಸದಸ್ಯರು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಗೂ ಅಧ್ಯಕ್ಷರು ಹೊಳೆ ಆಲೂರ, ಬಿಜೆಪಿ ಮಂಡಳದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ರೋಣ ತಾಲೂಕ ಎಲ್ಲಾ ಆಡಳಿತ ಸಿಬ್ಬಂದಿಗಳು, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯತಿ ಸದಸ್ಯರು,ಜಿಲ್ಲಾ ಪಂಚಾಯತಿ ಸದಸ್ಯರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ವರದಿ ವೀರಣ್ಣ ರೋಣ

error: