April 28, 2024

Bhavana Tv

Its Your Channel

ಕಾರಹುಣ್ಣಿಮೆ ನಿಮಿತ್ತ ಕರಿ ಹರಿಯುವ ಕಾರ್ಯಕ್ರಮ

ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ಇಂದು ಕಾರಹುಣ್ಣಿಮೆ ನಿಮಿತ್ತವಾಗಿ ಕರಿ ಹರಿಯುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕೃಷಿ ಪ್ರಧಾನವಾದ ರಾಷ್ಟ್ರ ನಮ್ಮ ಭಾರತ ದೇಶ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಸಮಸ್ತ ರೈತ ಬಾಂಧವರು ಬಿಸಿಲಿನ ಬೇಗೆಯಿಂದ. ಹೊಲ-ಗದ್ದೆಗಳಲ್ಲಿ ಕಸಕಡ್ಡಿ ಮತ್ತು ಮರಳನ್ನು. ಶುಚಿಗೊಳಿಸಿ ಹದಮಾಡಿ ಬೇಸಿಗೆ ಕಳೆದು ಮುಂಗಾರುಮಳೆ ಮನೆ ಅಂಗಳಕ್ಕೆ ಕಾಲಿಡುವ ಹಬ್ಬವೇ ಕಾರಹುಣ್ಣಿಮೆ. ನಮ್ಮ ಕೃಷಿ ಸಂಸ್ಕೃತಿಯ ವಿಶೇಷ ಹಬ್ಬವಾದ ಇಂದು ಪ್ರಾಣಿಗಳ ನಡುವಿನ ಅನ್ನೋನ್ಯ ಸಂಬAಧ ಎಂದು ಹೇಳಬಹುದು. ಉತ್ತಮ ಮಳೆ- ಬೆಳೆ ಸಮೃದ್ಧಿ ಸುಖ ಶಾಂತಿ ನೆಮ್ಮದಿ ನೀಡುವ ಹಬ್ಬವೇ ಕಾರ ಹುಣ್ಣಿಮೆ ಎಂದು ಹೇಳಬಹುದು.ರೋಣ ನಗರದಲ್ಲಿ ಪೋತರಾಜನ ಕಟ್ಟೆ ಹತ್ತಿರ ಕರಿ ಹರಿಯುವ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಬಸವರಾಜ್ ಮುಗಳಿ ಇವರ ಬಿಳಿ ಎತ್ತು ಕರಿಯನ್ನು ಹರಿಯುವ ಮೂಲಕ ಹಿಂಗಾರಿ ಬೆಳೆಯುವ ಚೆನ್ನಾಗಿ ಬರುತ್ತದೆ ಎಂದು ಇಲ್ಲಿಯ ರೈತರ ವಾಡಿಕೆ. ಅಂದರೆ ಬಿಳಿ ಜೋಳ, ಗೋಧಿ, ಖುಷಿಬಿ, ಹಿಂಗಾರಿ ಬೆಳೆಗಳು ಸಮೃದ್ಧಿ ಎಂದು ಬಿಳಿ ಎತ್ತು ಕರಿ ಹರಿಯಿತು.
ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ್, ಸಿದ್ದಪ್ಪ ನವಲಗುಂದ್, ಶೇಖಪ್ಪ ಕಲ್ಲಿಗನ್ವರ,ಶಿವನಗೌಡ ಲಿಂಗನಗೌಡ, ಎಲ್ಲಪ್ಪ ರಂಗನಗೌಡ, ಚನ್ನಬಸವನಗೌಡ ರಾಯನಗೌಡ, ಎಲ್ಲಪ್ಪ ಪಲ್ಯದ,ಬಸವರಾಜ್ ಕಿರೇಸೂರ,ನಿಂಗಪ್ಪ ಕಳಸಣ್ಣವರ, ಬಸವರಾಜ್ ಮುಗುಳಿ, ಪರಸಪ್ಪ ಮುಗಳಿ, ಶಶಿಧರ್ ಕಿರೆಸುರ್, ಇನ್ನು ಹಲವಾರು ನಾಯಕರು ಯುವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದ ಗದಗ

error: