December 22, 2024

Bhavana Tv

Its Your Channel

ಹಿರೇಹಾಳ ಗ್ರಾಮದಲ್ಲಿ ನಡೆದ ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ

ರೋಣ: ಶಿವಯೋಗಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಸಾಹಿತ್ಯ, ಧಾರ್ಮಿಕ, ಸಂಗೀತ, ನಾಟಕ, ಶೈಕ್ಷಣಿಕ ಕ್ಷೇತ್ರದ ಸೇವೆ ಅನುಪಮ ಹಾಗೂ ಅಜರಾಮರವಾಗಿದೆ ಎಂದು ಹಿರೇಹಾಳ ಗ್ರಾಮದ ಮುಖಂಡ ಸಾಂತನಗೌಡ ಬಸನಗೌಡ ಪೊಲೀಸ್ ಪಾಟೀಲ ಹೇಳಿದರು.
ತಾಲ್ಲೂಕಿನ ಹಿರೇಹಾಳ ಗ್ರಾಮದಲ್ಲಿ ಹಿರೇಹಾಳ ಗ್ರಾಮದಲ್ಲಿ ಮಂಗಳವಾರ ನಡೆದ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಪುಣ್ಯಸ್ಮರಣೆಯಲ್ಲಿ ಅವರು ಮಾತನಾಡಿದರು,
ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಮಹಾನೀಯರು ತಮ್ಮದೇ ಆದ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುವ ಮೂಲಕ ದೇವಮಾನವರಾಗಿ ಗುರುತಿಸಿಕೊಂಡಿದ್ದಾರೆ. ಅಂತವರಲ್ಲಿ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳು ಕೂಡ ಒಬ್ಬರು ಎಂದರು. ಪುಣ್ಯಸ್ಮರಣೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುಟ್ಟರಾಜರ ಭಾವಚಿತ್ರ ಮೆರವಣಿಗೆ ನಡೆಯಿತು. ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿತು.
ಈ ಸಂದರ್ಭದಲ್ಲಿ ಯಲ್ಲಪ್ಪ ಡೊಳ್ಳಿನ, ಆನಂದ ವಸ್ತ್ರದ, ಕುಮಾರ ಹವಾಜಿ, ಸಂತೋಷ ಪೂಜಾರ, ಪರಶುರಾಮ ಗರಡಿ, ಅಮರಗೌಡ ಕಲ್ಲಿನಗೌಡ್ರ, ಆನಂದ ಬಿಂಗಿ, ರವಿ ಹೂಗಾರ, ನಾಗಪ್ಪ ಹುಡೇದ, ವೀರಣ್ಣ ಹುಳ್ಳಿ, ಆಕಾಶ ಗೌಡರ, ಪ್ರಕಾಶ ಬಿನ್ನಾಳ, ಬಸವರಾಜ ಶಿರಗುಂಪಿ ಇದ್ದರು.

ವರದಿ ವೀರಣ್ಣ ಸಂಗಳದ

error: