ರೋಣ ; ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದ ಶ್ರೀ ಗ್ರಾಮ ದೇವತೆಗಳ ಜಾತ್ರೆಯು ಮಂಗಳವಾರ ದಿಂದ ಸಡಗರ ಸಂಭ್ರಮದಿoದ ಪ್ರಾರಂಭವಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಹೂವಿನಿಂದ ಅಲಂಕೃತಗೊAಡ ಗ್ರಾಮ ದೇವತೆಗಳಾದ ಶ್ರೀ ದ್ಯಾಮಮ್ಳದೇವಿ ಹಾಗೂ ಶ್ರೀ ದುರಗಮ್ಮ ದೇವತೆಗಳ ಮೂರ್ತಿಗಳಿಗೆ ಇಲ್ಲಿಯ ಹಾಳಕೆರೆಯ ಶ್ರೀ ಅನ್ನದಾನೇಶ್ವರ ಮಠದಲ್ಲಿ ಬಡಿಗೇರ ಮನೆತನದ ಆಚಾರ್ಯರು ವಿಶೇಷವಾಗಿ ಪೂಜೆಯನ್ನು ಸಲ್ಲಿಸಿದರು.
ಬಳಿಕ ಶ್ರೀಗಳವರ ಮಠದ ಆವರಣದಿಂದ ಹೊರಟ ಮೆರವಣಿಗೆಯು ಪ್ರಾರಂಭವಾಗಿ ಸುಮಂಗಲಿಯರ ಕುಂಭದೊAದಿಗೆ, ಡೊಳ್ಳು ಕುಣಿತ, ಸಕಲ ವಾದ್ಯ ವೈಭವದೊಂದಿಗೆ ಬಹು ವಿಜೃಂಭಣೆಯಿAದ ಗ್ರಾಮದೇವತೆಯರ ಮೆರವಣಿಗೆಯು ಬಸ್ ನಿಲ್ದಾಣ ಮೂಲಕ ಊರ ಪ್ರವೇಶಿಸಿ ಪ್ರಮುಖ ಬೀದಿಯಲ್ಲಿ ಸಾಗಿ ಊರ ಮಧ್ಯದಲ್ಲಿರುವ ಶ್ರೀ ಗ್ರಾಮ ದೇವತೆಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.
ಈ ಭವ್ಯವಾದ ಮೆರವಣಿಗೆ ಸಾಗಿದಾಗ ಭಕ್ತರು ಉಧೋ…. ಉಧೋ…. ಎಂದು ಜೈ ಘೋಷಣೆಗಳು ಮುಗಿಲು ಮುಟ್ಟಿತ್ತು.
ಗ್ರಾಮದ ಪ್ರತಿಯೊಂದು ಮನೆಯವರೂ ವಿವಿಧ ತೆರನಾದ ಸಿಹಿ ಪದಾರ್ಥಗಳನ್ನು ಮಾಡಿ ಭಕ್ತಿಯಿಂದ ದೇವತೆಗಳಿಗೆ ನೈವೇದ್ಯ ಅರ್ಪಿಸಿದರು.
ಜನರು ತಿಂಗಳ ಪರ್ಯಂತ ಮನೆಗಳನ್ನು ಸ್ವಚ್ಛ ಮಾಡಿ ಸುಣ್ಣ ಬಣ್ಣ ಬಳಿದು, ತಳಿರು ತೋರಣಗಳನ್ನು ಕಟ್ಟಿ, ಮನೆಯ ಮುಂದೆ ರಂಗೋಲಿ ಹಾಕಿ ದೇವತೆಗಳನ್ನು ಊರಲ್ಲಿ ಬರಮಾಡಿಕೊಂಡರು.
ಊರಿನ ಪ್ರತಿ ಮನೆಯಲ್ಲೂ ಜಾತ್ರೆಯ ಸಡಗರ ಸಂಭ್ರಮ ಮನೆ ಮಾಡಿತ್ತು. ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸರ್ವರಿಗೂ ಸುಸ್ವಾಗತ ಶುಭ ಕೋರುವ ಫ್ಲೆಕ್ಸ್ ಬ್ಯಾನರ್ ರಾರಾಜಿಸುತ್ತಿವೆ, ಗ್ರಾಮಕ್ಕೆ ಆಗಮಿಸುವ ಜನರ ಕಣ್ಮನ ಸೆಳೆಯುತ್ತವೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಸಕಲ ಸದ್ಭಕ್ತರು ಸುತ್ತುಮುತ್ತಲಿನ ಭಕ್ತರು ಪಾಲ್ಗೊಂಡು ಭಕ್ತಿಯನ್ನು ಸಮರ್ಪಿಸಿದರು.
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ