December 22, 2024

Bhavana Tv

Its Your Channel

ಪ್ರಥಮ ಬಾರಿ ರೋಣದಲ್ಲಿ 25 ಜೋಡಿಗಳ ಸರ್ವ ಧರ್ಮಗಳ ಸಾಮೂಹಿಕ ವಿವಾಹ

ರೋಣ: ಪ್ರಪ್ರಥಮ ಬಾರಿಗೆ ಬಡವರ ಕಲ್ಯಾಣಕ್ಕಾಗಿ ರೋಣ ನಗರದಲ್ಲಿ 25 ಜೋಡಿಗಳ ಸರ್ವ ಧರ್ಮಗಳ ಸಾಮೂಹಿಕ ವಿವಾಹಗಳು ಎಸ್.ಆರ್. ರಾಯಲ್ ಫೌಂಡೇಶನ್ ರೋಣ (ಲಿ)ಇವರ ವತಿಯಿಂದ ನಡೆದವು.

ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಗುರುಪಾದೇಶ್ವರ ಮಹಾಸ್ವಾಮಿಗಳು ಗುಲಗಂಜಿಮಠ, ರೋಣ, ಪೂಜ್ಯ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಹಿರೇಮಠ, ಜಿಗೇರ, ಹಾಗೂ ಹಜರತ್ ಸೈಯದ್ ಸುಲೇಮಾನ ಶ್ಯಾವಲಿ ದರ್ಗಾದ ಅಜ್ಜನವರು ಸಾನಿದ್ಯ ವಹಿಸಿದ್ದರು,
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಜಿ ಎಸ್ ಪಾಟೀಲ ಮಾತನಾಡಿ ಮದುವೆ ಇದು ಜನುಮ ಜನುಮಗಳ ಅನುಬಂಧ, ಜೊತೆಗೆ ಎರಡು ಮನೆ- ಮನಸ್ಸುಗಳನ್ನು ಒಗ್ಗೂಡಿಸುವ ಪವಿತ್ರ ಕಾರ್ಯ.ವಿವಾಹವು ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಒಂದು ಪ್ರಮುಖ ಘಟ್ಟ . ಎರಡು ಜೀವ-ಮನಸ್ಸುಗಳನ್ನು ಹತ್ತಿರ ತಂದು ಬದುಕಿನ ಕೊನೆತನಕ ಜೊತೆಯಾಗಿ ಬಾಳುವಂತೆ ಹರಸುವಂತಹ ಈ ಜವಾಬ್ದಾರಿಯುತ ಕಾರ್ಯಕ್ಕೆ ಸಮಾಜದಲ್ಲಿ ಪ್ರಮುಖ ಸ್ಥಾನವಿದೆ. ಆದರೆ ಈ ಆಧುನಿಕತೆಯ ಭರಾಟೆಯಲ್ಲಿ ಮದುವೆ ಸಾಂಪ್ರದಾಯಿಕತೆಯಿAದ ದೂರ ಸಾಗುತ್ತಾ ವಿಭಿನ್ನ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಮದುವೆ ಸಂದರ್ಭದಲ್ಲಿ ಉಳ್ಳವರು ಮಾಡುವ ಖರ್ಚು, ದುಂದುವೆಚ್ಚ, ಆಡಂಬರ ಒಂದುಕಡೆಯಾದರೆ, ಮದುವೆಯಾಗಲು ಆರ್ಥಿಕ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿರುವವರು ಇನ್ನೊಂದು ಕಡೆ. ಬಡ ಕುಟುಂಬಗಳಲ್ಲಿ ಮದುವೆ ಕಾರ್ಯ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರೋನೊತ್ತರ ದಿನಗಳಲ್ಲಂತೂ ಬಡಕುಟುಂಬಗಳಿಗೆ ವಿವಾಹ ಕಾರ್ಯ ನಡೆಸಲು ತುಂಬಾ ಕಷ್ಟ ಎಂದು ಹೇಳಿದರು

ಈ ಎಲ್ಲಾ ವಿಷಯವನ್ನು ಗಮನದಲ್ಲಿಟ್ಟುಕೊಂಡು ಆ ಮೂಲಕ ಬಡಕುಟುಂಬಗಳ ಯುವಕ-ಯುವತಿಯರಿಗೆ ಮದುವೆ ಭಾಗ್ಯ ಕಲ್ಪಿಸಲಾಗಿದೆ ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತ್ರಿ ಸಂಗು ನವಲಗುಂದ ಬಸವಂತಪ್ಪ ತಳವಾರ ಸಂಜೆಯ ದೊಡ್ಮಮನೆ ಸೋಮು ನಾಗರಾಜ ಎಸ್ ಎಂ ಮರಿಗೌಡರ ಇದ್ದರು.
ವರದಿ: ವೀರಣ್ಣ ಸಂಗಳದ ರೋಣ

error: