April 29, 2024

Bhavana Tv

Its Your Channel

ಜಿಗಳೂರು ಗ್ರಾಮ ಪಂಚಾಯತಿ ಉಪಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಯಿಂದ ವಿಜಯೋತ್ಸವ

ರೋಣ : ಹೊಸಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಿಗಳೂರು ಗ್ರಾಮದ ಪಂಚಾಯತಿ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ರವಿವಾರ ರೋಣ ತಹಶೀಲ್ದಾರ್ ಕಾರ್ಯಾಲಯದಲ್ಲಿ ಜರುಗಿತು ಒಟ್ಟು 5ಸ್ಥಾನಗಳಿಗೆ 14 ಜನ ನಾಮಪತ್ರ ಸಲ್ಲಿಸಿದ್ದರು .

ಅನ್ನಪೂರ್ಣಾ ವೀರಗಾರ 253, ಪ್ರವೀಣ ಫಕ್ಕೀರಪ್ಪ ಬಸೇವಡೆಯರ 332, ರೇಖಾ ಮಾದರ 215,
ಶೋಭಾ ಗೊಟಗೊಂಡ 312, ಕೆ ಶಿವಯೋಗಿ ತಡಿ 276 ಮತಗಳನ್ನು ಪಡೆಯುವುದರ ಮೂಲಕ
ಇವರು ಗ್ರಾಮಪಂಚಾಯತಿ ನೂತನ ಸದಸ್ಯರಾಗಿ ಆಯ್ಕೆಯಾದರು. ಅಭ್ಯರ್ಥಿಗಳ ಪರ ಬೆಂಬಲಿತರು ತಹಶೀಲ್ದಾರ ಕಚೇರಿಯಲ್ಲಿ ಸಿಹಿ ತಿನಿಸಿ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸಿದರು.

ಸತತ 7ವರ್ಷಗಳಿಂದ ತಮ್ಮ ಗ್ರಾಮಕ್ಕೆ ಪಂಚಾಯತಿ ಕೇಂದ್ರಸ್ಥಾನ ನೀಡಬೇಕು ಎಂದು ಆಗ್ರಹಿಸಿ ಅನೇಕ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಾ ಬಂದಿದ್ದರು
ಜಿಗಳೂರು ಗ್ರಾಮಸ್ಥರು. ಈ ಬಾರಿ ನಡೆದ ಉಪ ಚುನಾವಣೆಯಲ್ಲಿ 14 ಜನ ಸ್ಪರ್ಧಿಸಿದ್ದರು. ಅದರಂತೆ ದಿನಾಂಕ 20 ರಂದು ಮತದಾನ ಪ್ರಕ್ರಿಯೆ ಜರುಗಿ, ರವಿವಾರ ಮತಎಣಿಕೆ ಆರಂಭವಾಯಿತು ಜಿಗಳೂರು ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿ ಕಾರ್ಯ ಜರುಗಿದ್ದು ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ವರದಿ: ವೀರಣ್ಣ ಸಂಗಳದ

error: