May 17, 2024

Bhavana Tv

Its Your Channel

ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಕೊಡುಗೆ‌ ನೀಡಿ ಮಾನವೀಯತೆ ಮೆರೆದಿರುವ ಸಮಾಜ ಸೇವಕ ಅರವಿಂದ್ ರಾಘವನ್.

ಪಾಂಡವಪುರ ; ಕೊರೊನಾ ಎರಡನೇ ಅಲೆಯಿಂದಾಗಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆ ಸೋಂಕಿತರ ಆರೈಕೆಗಾಗಿ ಸಮಾಜ ಸೇವಕ, ವಕೀಲ ಅರವಿಂದ್ ರಾಘವನ್ ಅವರಿಂದ 10 ಲಕ್ಷ ರೂ.ವೆಚ್ಚದಲ್ಲಿ 6 ಆಕ್ಸಿಜನ್ ಕಾನ್ಸಟೇಟರ್, 10 ಐಸಿಯು ಬೆಡ್ ಜತೆ ಸೈಡ್ ಟೇಬಲ್ ಗಳು, 20 ಪಿಪಿಇ ಕಿಟ್ ಹಾಗೂ 20 ಆಕ್ಸಿ ಮೀಟರ್ ಗಳ ಕೊಡುಗೆ.

ಆಸ್ಪತ್ರೆಗೆ ಅರವಿಂದ್ ರಾಘವನ್ ನೀಡಿದ ಈ ಎಲ್ಲಾ ಕೊಡುಗೆಗಳನ್ನು ಶಾಸಕ ಸಿ.ಎಸ್.ಪುಟ್ಟರಾಜು ಅವರು ಉಪವಿಭಾಗೀಯ ಆಸ್ಪತ್ರೆ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಡಾ.ಎಚ್.ಕುಮಾರ್ ಅವರಿಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ವೃತ್ತಿಯಲ್ಲಿ ವಕೀಲರಾಗಿರುವ ಅರವಿಂದ ರಾಘವನ್ ಮೇಲುಕೋಟೆ ಕ್ಷೇತ್ರದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಶಿಕ್ಷಣ ಕ್ಷೇತ್ರವಲ್ಲದೇ ಇತರೆ ಕ್ಷೇತ್ರಗಳಿಗೆ ಹತ್ತು-ಹಲವಾರು ಕೊಡುಗೆ ನೀಡಿರುವ ಅರವಿಂದ್ ರಾಘವನ್ ಅವರು, ಇದೀಗ ಆಸ್ಪತ್ರೆಗೆ 10ಲಕ್ಷ ರೂ. ವೆಚ್ಚದಲ್ಲಿ ಆಕ್ಸಿಜನ್ ಕಾನ್ಸಟೇಟರ್, ಐಸಿಯು ಬೆಡ್, ಪಿಪಿಇ ಕಿಟ್ ಹಾಗೂ ಪಲ್ಸ್ಆಕ್ಸಿ ಮೀಟರ್ ಕೊಡುಗೆ ನೀಡಿರುವುದು ಶ್ಲಾಘನೀಯ ಎಂದರು.

ಈ ವೇಳೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಕುಮಾರ್, ಟಿಎಚ್ಒ ಡಾ.ಸಿ.ಎ.ಅರವಿಂದ, ಪುರಸಭೆ ಸದಸ್ಯರಾದ ಎಂ.ಗಿರೀಶ್, ಬಿ.ವೈ.ಬಾಬು, ಮನ್ ಮುಲ್ ನಿರ್ದೇಶಕ ಕೆ.ರಾಮಚಂದ್ರ, ಶಿಕ್ಷಕರಾದ ಮಾಣಿಕ್ಯನಹಳ್ಳಿ ಜಯರಾಂ, ಪ.ಮ.ನಂಜುಂಡ ಸ್ವಾಮಿ, ಮೇನಾಗ್ರ ಪ್ರಕಾಶ್ ಇತರರಿದ್ದರು…

ವರದಿ.. ಟಿ ಎಸ್ ಶಶಿಕಾಂತ್ ಶೆಟ್ಟಿ, ಮಂಡ್ಯ.. ಪಾಂಡವಪುರ

error: