April 27, 2024

Bhavana Tv

Its Your Channel

ಅನಿತಾ ರಮೇಶ್ ಆರೋಪಕ್ಕೆ ಸ್ಪಷ್ಟಿಕರಣ ನೀಡಿದ ಗುಮ್ಮನಹಳ್ಳಿ ಗ್ರಾ.ಪಂ ಸದಸ್ಯರು.

ಪಾಂಡವಪುರ; ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಗುಮ್ಮನಹಳ್ಳಿ ಗ್ರಾ.ಪಂ ಸದಸ್ಯರು.
ಪಿಡಿಒ ಕುಮಾರ್ ಅವರಿಂದ ಯಾವ ಹಣ ದುರುಪಯೋಗವೂ ಆಗಿಲ್ಲ, ಜತೆಗೆ ಕೋವಿಡ್ ಸಾವು ಉಂಟಾದಾಗ ಹಾಗೂ ಸೋಂಕು ಹೆಚ್ಚಳವಾದಾಗ ಉತ್ತಮ ಕಾರ್ಯನಿರ್ಹಹಣೆ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ ಸದಸ್ಯರು ಸ್ಪಷ್ಟಪಡಿಸಿದರು.
ಪಂಚಾಯಿತಿ ವ್ಯಾಪ್ತಿಯ ಒಂಭತ್ತು ಗ್ರಾಮಗಳಲ್ಲಿ ಸ್ಯಾನಿಟೈಸ್ ಸಿಂಪಡಣೆ ಮಾಡಿದ್ದೇವೆ. ಜತೆಗೆ ೨೫% ಅನುದಾನ ಬಳಕೆ ಮಾಡುತ್ತಿದ್ದು, ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಮಾಡಲು ಆಯ್ಕೆಯಾಗಿ ಬಂದಿದ್ದೇವೆ. ಯಾವುದೇ ತಪ್ಪಿದ್ದರೆ ಪಂಚಾಯಿತಿ ಮಟ್ಟದಲ್ಲೇ ನೇರವಾಗಿ ತಿಳಿಸಿದರೆ ತಿದ್ದುಕೊಳ್ಳಬಹುದು. ಆದರೆ ಏಕಾಏಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವುದು ಸರಿಯಲ್ಲ ಎಂದರು.
ಅಧಿಕಾರ ವಹಿಸಿಕೊಂಡ ಮೂರು ತಿಂಗಳ ಅವಧಿಯಲ್ಲಿ ಪಂಚಾಯಿತಿಯಲ್ಲಿ ಯಾವುದೇ ಅನ್ಯಾಯ, ಅಕ್ರಮ ನಡೆದಿಲ್ಲ,ಆಧಾರರಹಿತ ಆರೋಪವಾಗಿದೆ. ೧೫ನೇ ಹಣಕಾಸಿನ ಯೋಜನೆಯಲ್ಲೂ ಯಾವುದೇ ಅಕ್ರಮವಾಗಲೀ, ಹಣ ದುರುಪಯೋಗ ಆಗಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೇ, ಸಾಮಾನ್ಯ ಸಭೆಯಲ್ಲಿ ಅನುಮೋದನೆಯಾದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಗುಮ್ಮನಹಳ್ಳಿ ಪಂಶ್ರೀನಿವಾಸ್, ಸದಸ್ಯರಾದ ರಘು, ಹೊಸೂರು ಸ್ವಾಮಿ, ಚಂದ್ರು, ಕೆ.ಜೆ.ವರದರಾಜು, ಮುಖಂಡ ಪುರಷೋತ್ತಮ್ ಇತರರಿದ್ದರು.

ವರದಿ.ಟಿ ಎಸ್ ಶಶಿಕಾಂತ್ ಶೆಟ್ಟಿ.ಮಂಡ್ಯ. ಪಾಂಡವಪುರ.

error: