May 3, 2024

Bhavana Tv

Its Your Channel

ತನ್ನ ಜಮೀನಿಗೆ ಹೋಗಲು ರಸ್ತೆಯಿಲ್ಲದೆ ರೈತನೊಬ್ಬ ಕಂಗಾಲು, ಬೆಳೆದ ಬೆಳೆಯೂ ಸಂಪೂರ್ಣ ಹಾಳು ಎಂದು ಕಣ್ಣೀರು

ಸ್ವಂತ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕಿತ್ತು ಮಾರಾಟ ಮಾಡಲು ಆಗದೆ ಜಮೀನಿಗೆ ಬಿತ್ತಿದ ಬಿತ್ತನೆಯ ಹಣವು ಇಲ್ಲದೆ ಕೆ ಆರ್ ಪೇಟೆ ತಾಲೋಕಿನ ಭೂಕನಕೆರೆ ಹೋಬಳಿಯ ವಡಕೆ ಶೆಟ್ಟಿಹಳ್ಳಿ ಗ್ರಾಮದ ರವಿ ಎಂಬ ರೈತ ಒಬ್ಬ ಕಂಗಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನಲ್ಲಿ ನೆಡೆದಿದೆ…

ಹೌದು ರಾಜ್ಯ ಮುಖ್ಯ ಮಂತ್ರಿಗಳ ತವರೂರು ಹಾಗೂ ಹುಟ್ಟೂರು ಭೂಕನಕೆರೆ ಹೋಬಳಿಯಲ್ಲಿ ಮನಕಲಕುವ ಘಟನೆಯೊಂದು ನಡೆಯುತ್ತಿದೆ ಅಧಿಕಾರಿಗಳು ಯಾರು ಸಹ ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ ರಸ್ತೆಯಲ್ಲಿ ಓಡಾಡಿದರೆ ಸಾಕು ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಾರೆ. ನಮ್ಮ ಮನೆಯಲ್ಲಿ ನಾವು ಇದ್ದರು ಸಾಕು ಮನೆಗೆ ನುಗ್ಗಿ ಹಲ್ಲೆ ಮಾಡುತ್ತಾರೆ ನಮಗೆ ಜೀವನ ಮಾಡಲು ತುಂಬಾ ತೊಂದರೆ ಆಗುತ್ತಿದೆ. ನಾವು ಜಮೀನಿಗೆ ಹೋಗಬೇಕಾದರೆ ಸುಮಾರು ಕಿಲೋಮೀಟರ್ ಗಂಟಲೇ ಬಳಸಿಕೊಂಡು ಹೋಗಬೇಕು ದಯಮಾಡಿ ರಸ್ತೆ ಬಿಡಿಸಿ ಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ರೈತ ರವಿ ಹಾಗೂ ಕುಟುಂಬಸ್ಥರು
ನಮಗೆ ಪ್ರಾಣಭಯ ಇದೆ ಮನೆಗೆ ಸಿಸಿ ಕ್ಯಾಮರಾ ಹಾಕಿಸಿದ್ದ ನಂತರದಲ್ಲಿ ಮನೆಗೆ ನುಗ್ಗಿ ಹಲ್ಲೆ ಮಾಡಿವುದು ತಪ್ಪಿದೆ
ಆದರೆ ಜಮೀನಲ್ಲಿ ನಾವು ಏನು ಆರಂಭ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳಿಗೆ ದೂರು ಕೊಟ್ಟರು ಯಾರು ಕ್ಯಾರೇ ಅನ್ನುತ್ತಿಲ್ಲ..

ತಾಲೋಕಿನ ದಂಡಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ನನಗೆ ದಯಮಾಡಿ ರಸ್ತೆ ಕೊಡಿಸಿ . ನಾನು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಅವಕಾಶ ಕೊಡಿಸಿ ಎಂದು ರೈತ ರವಿ ಅವರು ಮಾಧ್ಯಮದ ಮುಖಾಂತರ ಮನವಿ ಮಾಡಿಕೊಂಡರು ..

ರಸ್ತೆಯಲ್ಲಿ ಓಡಾಡಲು ಹೋದರೆ ಸ್ವಂತ ಹೆಣ್ಣು ಕೊಟ್ಟ ಮಾವ ಲಕ್ಷಣಗೌಡ ಹಾಗೂ ಅತ್ತೆ ರತ್ನಮ್ಮ. ಮಕ್ಕಳು ದಿನೇಶ್ ಮಹೇಶ್ ಅವರು ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ. ಎಂದು ಭಾವುಕರಾಗಿ ರಸ್ತೆ ಬಿಡಿಸಿ ಎಂದು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ…

ವರದಿ; ಶಂಭು ಕಿಕ್ಕೇರಿ

error: