June 8, 2023

Bhavana Tv

Its Your Channel

ಕೆರೆ ಕೋಡಿಯಲ್ಲಿ ವಯೋವೃದ್ಧೆ ಕೆರೆಗೆ ಹಾರಿ ಆತ್ಮಹತ್ಯೆ

ಮಂಡ್ಯ ಜಿಲ್ಲೆ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನುವಿನಕಟ್ಟೆಯ ಕೆರೆಕೋಡಿಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಬೋರಮ್ಮ ಸ್ವಾಭಿಮಾನಿ ಮಹಿಳೆಯಾಗಿದ್ದರು. ಹೊಟ್ಟೆನೋವಿನಿಂದ ಬಳಲುತ್ತಿದ್ದ ಬೋರಮ್ಮ ಕೊರೋನಾ ಹಿನ್ನೆಲೆಯಲ್ಲಿ ಹೌಸ್ ಲಾಕ್ ಆಗಿ ಮನೆಯಿಂದ ಹೊರ ಬಂದು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಾಗದೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯ ಸಿಬ್ಬಂಧಿಗಳು ಕೆರೆಯ ನೀರಿನಿಂದ ಶವವನ್ನು ಹೊರತೆಗೆದು ಶವಾಗಾರಕ್ಕೆ ಮೃತದೇಹವನ್ನು ಸ್ಥಳಾಂತರಿಸಿದ್ದಾರೆ.

ಮೃತ ಬೋರಮ್ಮ ಅವರ ಪುತ್ರರಾದ ಚಾಲಕ ವೆಂಕಟೇಶ್ ಮತ್ತು ದೇವರಾಜು ತಮ್ಮ ತಾಯಿ ಬೋರಮ್ಮ ನಿನ್ನೆಯಿಂದ ಕಾಣೆಯಾಗಿದ್ದಾರೆಂದು ಪೋಲಿಸರಿಗೆ ದೂರು ನೀಡಿದ್ದರು.

ಕೆರೆಯಲ್ಲಿ ತೇಲುತ್ತಿದ್ದ ಮೃತ ದೇಹವನ್ನು ನೀರಿನಿಂದ ಹೊರ ತೆಗೆದಾಗ ಬೋರಮ್ಮ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬAತು.

ಪಟ್ಟಣ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

About Post Author

error: