September 15, 2024

Bhavana Tv

Its Your Channel

ಪೋಲಿಸರಿಗೆ ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ ಮೂವರು ಯುವಕರು ಆರೆಷ್ಟ.

ಮಂಡ್ಯ ; ಕೃಷ್ಣರಾಜಪೇಟೆ ತಾಲ್ಲೂಕಿನ ತೆಂಡೇಕೆರೆ ಚೆಕ್ ಪೋಸ್ಟ್ ನಲ್ಲಿ ಚೆಕ್ ಪೋಸ್ಟ್ ಅಧಿಕಾರಿಗಳು ಹಾಗೂ ಪೋಲಿಸರಿಗೆ ಬೆದರಿಸಿ ಆಟೋದಲ್ಲಿ ಪರಾರಿಯಾಗಿದ್ದ ಮೂವರು ಯುವಕರನ್ನು ಕೆ.ಆರ್.ಪೇಟೆ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಗ್ರಾಮಾಂತರ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಲಕ್ಷ್ಮಣ್ ಅವರ ನೇತೃತ್ವದಲ್ಲಿ ರಾತ್ರಿಯಿಡೀ ಕಾರ್ಯಚರಣೆ ನಡೆಸಿ ಪತ್ತೆ ಮಾಡಿ ಬಂಧಿಸಿದ್ದಾರೆ. ಇದರಿಂದಾಗಿ ತಾಲ್ಲೂಕಿನ ಜನತೆಯಲ್ಲಿ ಉಂಟಾಗಿದ್ದ ಆತಂಕವನ್ನು ಕೃಷ್ಣರಾಜಪೇಟೆ ಗ್ರಾಮಾಂತರ ಪೋಲಿಸರು ದೂರ ಮಾಡಿದ್ದಾರೆ.
ಬೂಕನಕೆರೆ ಹೋಬಳಿಯ ಬಳ್ಳೇಕೆರೆ ಗ್ರಾಮದ ಮಹೇಶ್.ಬಿನ್ ಕೆಂಪಟ್ಟಿಗೌಡ,
ಅಭಿಶೇಕ್ ಬಿನ್ ಮಹೇಶ, ಶ್ರೀನಿವಾಸ್ ಬಿನ್ ಪುಟ್ಟರಾಜು, ಬಂಧಿತ ಯುವಕರು ಎಂದು ಪೋಲಿಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತರ ಪೈಕಿ ಮಹೇಶ್ ಬೆಂಗಳೂರಿನಲ್ಲಿ ಆಟೋ ಓಡಿಸುವ ವೃತ್ತಿ ಮಾಡುತ್ತಿದ್ದು, ಯುಗಾದಿ ಹಬ್ಬಕ್ಕೆ ಸ್ವಗ್ರಾಮ ಬಳ್ಳೇಕೆರೆಗೆ ಬಂದಿದ್ದರು. ಹಾಗಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಹೇಶ್ ಕೈಗೆ ಗ್ರಾಮ ಪಂಚಾಯಿತಿ ಯವರು ಸೀಲ್ ಹಾಕಿ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಆದೇಶ ನೀಡಿದ್ದರು. ಆದರೆ ಸ್ನೇಹಿತರೊಂದಿಗೆ ಚನಕುರಳಿಗೆ ಹೋಗಿ ವಾಪಸ್ ಬರುವಾಗ ತೆಂಡೇಕೆರೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಹಿಡಿದುಕೊಳ್ಳುತ್ತಾರೆ ಎಂಬ ಭಯದಿಂದ ನಮಗೆ ಕೊರೋನೊ ಇದೆ ಮುಟ್ಟಿದರೆ ನಿಮಗೂ ಕೊರೋನೋ ಬರುತ್ತದೆ ನೋಡಿ ಎಂದು ಕೈಯಲ್ಲಿದ್ದ ಸೀಲ್ ತೋರಿಸಿ ಭಯಹುಟ್ಟಿಸಿ ಯುವಕರು ಪರಾರಿಯಾಗಿದ್ದರು.

ಘಟನೆ ನಡೆದ ಕೇವಲ ೧೨ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ತಾಲೂಕಿನ ಜನತೆಯ ಭಯವನ್ನು ಹೋಗಲಾಡಿಸಿದ ಕೃಷ್ಣರಾಜಪೇಟೆ ಗ್ರಾಮಾಂತರ ಪೋಲಿಸರ ಕಾರ್ಯದಕ್ಷತೆಯನ್ನು ಸಾರ್ವಜನಿಕರು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಅಭಿನಂದಿಸಿದ್ದಾರೆ.

error: