February 13, 2025

Bhavana Tv

Its Your Channel

ಶ್ರವಣ ಬೆಳಗೊಳ ಹಾಸನ ಜಿಲ್ಲೆಗೆ ಸಂಪರ್ಕಿಸುವ ಹೋಬಳಿಯ ಎಲ್ಲಾ ಮುಖ್ಯ ರಸ್ತೆಗಳನ್ನು ಸಂಪೂರ್ಣ ಬಂದ್

ಮoಡ್ಯ ಜಿಲ್ಲೆಯ ನಾಗಮಂಗಲದಿoದ ಸಂಪರ್ಕಿಸುವ ಬೆಟ್ಟದಹಳ್ಳಿ ಹಾಗೂ ಸಂತೆಬಾಚಹಳ್ಳಿ ರಸ್ತೆ, ಮೇಲುಕೋಟೆ ರಸ್ತೆ, ಕೆ.ಆರ್.ಪೇಟೆ ರಸ್ತೆ, ಕಿಕ್ಕೇರಿ ರಸ್ತೆ ಹಾಗೂ ಆನೆಗೊಳದಿಂದ ಕಾಂತರಾಜಪುರ, ಚಿಕ್ಕಬೀಳ್ತಿ, ಮಾದಪುರ, ದೊಡ್ಡತರಹಳ್ಳಿ, ಚಿಕ್ಕತರಹಳ್ಳಿ ಗಡಿ ಮಾರ್ಗವಾಗಿ ಬರುವ ಜಿಲ್ಲೆಗೆ ಸಂಪರ್ಕಿಸುವ ರಸ್ತೆಗಳಿಗೆ ಮಣ್ಣುಗಳನ್ನು ಹಾಕಿ ಸಂಪೂರ್ಣ ಬಂದ್ ಮಾಡಲಾಯಿತು.

ಮಂಡ್ಯ ಜಿಲ್ಲೆಯಲ್ಲಿ ಕರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹೊರ ಜಿಲ್ಲೆಯ ಸಂಪರ್ಕ ನಿರ್ಬಂಧಿಸಲಾಯಿತು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮೋಹನ್ ಕುಮಾರ್, ಕಾಂತರಾಜಪುರ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ವಿ.ಪಿ.ಸುಧಾ, ಪಿಡಿಒ ಎ.ರಾಘವೇಂದ್ರ, ಪಿ.ಎ. ಸಿ.ಸಿ. ನಿರ್ದೇಶಕ ವಿ.ಆರ್.ರಾಜೇಶ್ ಮುಂತಾದವರಿದ್ದರು.

error: