April 28, 2024

Bhavana Tv

Its Your Channel

ಕೃಷ್ಣರಾಜಪೇಟೆ ನಾಗರಿಕರಿಂದ ಪಿಂಚಣಿ ಹಣ ಬಿಡುಗಡೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ

ಕೃಷ್ಣರಾಜಪೇಟೆ ತಾಲ್ಲೂಕಿನ ಅಂಗವಿಕಲರಿಗೆ, ವೃದ್ದರಿಗೆ, ವಿಧವಾ ವೇತನ ಸೇರಿಂದತೆ ಹಲವಾರು ಯೋಜನಗಳ ಪಲಾನುಭವಿಗಳಿಗೆ ವೇತನ ನಿಲುಗಡೆ ಆಗಿರುವ ಹಿನ್ನೆಲೆ ನೂರಾರು ಜನರು ತಾಲ್ಲೂಕು ಕಚೇರಿಗೆ ಭೇಟಿ ನೀಡಿ ತಹಸಿಲ್ದಾರ್ ಎಂ ಶಿವಮೂರ್ತಿರವರಿಗೆ ಮನವಿ ಸಲ್ಲಿಸಲಾಯಿತು

ಕೆ ಆರ್ ಪೇಟೆ ತಾಲ್ಲೂಕು ಕಛೇರಿಗೆ ಪಿಂಚಣಿ ಹಣ ನಿಲುಗಡೆ ಆಗಿ ಕಳೆದ 10 ತಿಂಗಳುಗಳಿAದ ತೊಂದರೆಯಲ್ಲಿ ಇರುವ ಹಿರಿಯ ನಾಗರಿಕರು, ಅಂಗವಿಕಲರು,ವಿಧವೆಯರು ಪುರಸಭೆ ಸದಸ್ಯ ಹೆಚ್. ಆರ್. ಲೋಕೇಶ್ ಅವರ ನೇತೃತ್ವದಲ್ಲಿ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಕೂಡಲೇ ಪಿಂಚಣಿ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ದಂಡಧಿಕಾರಿ ಶಿವಮೂರ್ತಿ ಅವರಿಗೆ ಮನವಿ ಮಾಡಲಾಯಿತು.

ಈ ಬಗ್ಗೆ ನೊಂದವರ ಪರವಾಗಿ ಚರ್ಚೆ ಮಾಡಿದ ಪುರಸಭೆ ಸದಸ್ಯ ಹೆಚ್. ಆರ್.ಲೋಕೇಶ್ ಒಎಪಿ, ವಿಧವಾವೇತನ, ಅಂಗವಿಕಲ ವೇತನ ಹಣ ಬಿಡುಗಡೆ ಆಗದೆ ಕಳೆದ 10 ತಿಂಗಳಿAದ ಹಿರಿಯ ನಾಗರಿಕರು ತೊಂದ್ರೆಗೆ ಸಿಲುಕಿದ್ದಾರೆ. ಆದ್ದರಿಂದ ಕೂಡಲೇ ಸರಕಾರದಿಂದ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ತಹಸೀಲ್ದಾರ್ ಅವರು ಎಲ್ಲಾ ಸಂತ್ರಸ್ತರಿಗೆ ಹಣ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಸರಕಾರ ಹಣ ಬಿಡುಗಡೆ ಮಾಡಿದ ತಕ್ಷಣ ಸಮಸ್ಯೆಗಳು ಪರಿಹಾರ ಆಗಲಿದೆ ಅಲ್ಲಿಯ ತನಕ ಸಹಕಾರ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ವೃದ್ಧರು, ವಿಧವೆಯರು ಪಿಂಚಣಿ ಹಣ ದೊರೆಯದೆ ತೀವ್ರ ತೊಂದರೆಯಲ್ಲಿ ಇರುವವರ ಕಣ್ಣೀರು ಹೇಳತೀರಾದಾಗಿದೆ. ಅವರ ದುಃಖ ದುಮ್ಮಾನ ನೋಡುತಿದ್ದರೆ ಮನಸ್ಸು ಭಾರವಾಗುತ್ತಿದೆ ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಿಸುವಂತೆ ಸಭೆಯಲ್ಲಿ ಹಾಜರಿದ್ದ ಜಗದೀಶ್,ಕುಳ್ಳ ಚಂದ್ರು, ರಾಜಸ್ವ ನಿರೀಕ್ಷಿಕಿ ಚಂದ್ರಕಲಾ, ಗ್ರಾಮಲೆಕ್ಕಿಗರು ಆದ ಹರೀಶ್ ಹಾಜರಿದ್ದರು.ಇದೆ ಸಂದರ್ಭದಲ್ಲಿ ಎಲ್ಲಾ ಪಲಾನುಭವಿಗಳಿಂದ ಹೊಸದಾಗಿ ಅರ್ಜಿಗಳನ್ನು ಸ್ವೀಕಾರ ಮಾಡಲಾಯಿತು…

ವರದಿ:ಶಂಭು ಕಿಕ್ಕೇರಿ

error: