
ಮoಡ್ಯ : ಪಾಂಡವಪುರ ಪಟ್ಟಣದ ಗುಮ್ಮನಹಳ್ಳಿ ಗ್ರಾಮದ ನಡೆದಿರುವ ಘಟನೆ.
ಗ್ರಾಮದ ಪುಟ್ಟಮಣಿ ಎಂಬುವರಿAದ ಹೊಸೂರು ಗ್ರಾಮದ ಗುಡ್ಡಪ್ಪ ದೇವರಾಜು ಹಾಗೂ ಕಣಿವೆಕೊಪ್ಪಲಿನ ಗುಡ್ಡಪ್ಪ ಚಿಕ್ಕಣ್ಣ ಎಂಬುವರು ಒಂದುವರೆ ಸಾವಿರ ಹಣ ಕಿತ್ತು ಮೋಸ ಎಸಗಿದ್ದಾರೆ.
ಏ.೭ರಂದು ಹೊಸೂರಿನ ಗುಡ್ಡಪ್ಪ ದೇವರಾಜು ಮನೆಗೆ ಪುಟ್ಟಮಣಿ ದೇವರ ಪೂಜೆಗೆ ಹೋಗಿದ್ದಾಗ ನಿಮ್ಮ ಮನೆಯಲ್ಲಿ ಯಾರೋ ಮಾಟ, ಮಂತ್ರ, ವಾಮಚಾರ ಮಾಡಿಸಿದ್ದಾರೆ. ಅದನ್ನು ಕಣಿವೆಕೊಪ್ಪಲಿನ ಗುಡ್ಡಪ್ಪ ಚಿಕ್ಕಣ್ಣ ಅವರಿಂದ ತೆಗೆಸಿ ಸರಿಪಡಿಸದಿದ್ದರೆ ಮನೆಯಲ್ಲಿ ಸಾವು ಸಂಭವಿಸಲಿದೆ ಎಂದು ಗುಡ್ಡಪ್ಪ ದೇವರಾಜು ಎಂಬುವವರು ನಂಬಿಸಿರುತ್ತಾರೆ. ಅದರಂತೆ ಪುಟ್ಟಮಣಿ ಮನೆಗೆ ಗುಡ್ಡಪ್ಪ ಚಿಕ್ಕಣ್ಣರನ್ನು ಕರೆಸಿ ಮಾಟ, ಮಂತ್ರ ತೆಗೆಸಿ ಒಂದುವರೆ ಸಾವಿರ ಹಣ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಬ್ಬರಿಬ್ಬರು ಗುಡ್ಡಪ್ಪರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಪುಟ್ಟಮಣಿ ಪುತ್ರ ಜಿ.ಕೆ.ರಮೇಶ್ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಜನರಲ್ಲಿ ಮೌಢ್ಯ ಭಿತ್ತುವ ಬದಲಿಗೆ ತಾಕತ್ತಿದ್ದರೆ ಈ ವ್ಯಕ್ತಿಗಳು ಮಹಾಮಾರಿ ಕೊರೊನಾ ವೈರಾಣು ಹೋಗಲಾಡಿಸಲಿ ಎಂದು ಸವಾಲೆಸೆದಿರುವ ದಲಿತ ಕ್ರಾಂತಿ ಸೇವಾ ಸಮಿತಿ ಅಧ್ಯಕ್ಷ ಬೊಮ್ಮರಾಜು ಅವರು ಇಂತಹವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ