October 5, 2024

Bhavana Tv

Its Your Channel

ಮೆಡಿಕಲ್ ಶಾಪ್ ಗಳನ್ನುಹೊರತುಪಡಿಸಿ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ತೆರೆಯುವಂತಿಲ್ಲ

ಮಂಡ್ಯ ; ಕೊರೋನ್ ವೈರಸ್ ಗೆ ಸಂಬoಧಿಸಿದoತೆ ಸಾರ್ವಜನಿಕರು ಮತ್ತು ಅಂಗಡಿ ಮುಂಗಟ್ಟಿನವರು ಎಚ್ಚೆತ್ತುಳ್ಳುತ್ತಿಲ್ಲ ನೀವುಗಳು ಜನರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿರುವುದು ಶಿಕ್ಷಾರ್ಹ ಅಪರಾಧವೆಂದು ತಿಳಿದು ಬಂದಿದ್ದರೂ ನೀವುಗಳು ಲೆಕ್ಕಿಸುತ್ತಿಲ್ಲ ಆದ್ದರಿಂದ ಇದು ಅಂತಿಮ ತಿಳುವಳಿಕೆ ಎಂದು ಮಂಡ್ಯ ತಾಲೂಕು ಬಸರಾಳು ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಕಟ್ಟೆಚ್ಚರ ನೀಡಲಾಯಿತು.
ಇನ್ನು ಮುಂದೆ ಮೆಡಿಕಲ್ ಶಾಪ್ ಗಳನ್ನುಹೊರತುಪಡಿಸಿ ಯಾವುದೇ ಅಂಗಡಿ-ಮುoಗಟ್ಟುಗಳನ್ನು ತೆರೆಯುವಂತಿಲ್ಲ ಆದರೆ ಗ್ರಾಮ ಪಂಚಾಯಿತಿ ವತಿಯಿಂದ ಲೈಸನ್ಸ್ ಪಡೆದಿರುವ ದಿನಸಿ ಹಾಲು ಹಣ್ಣು ಮತ್ತು ತರಕಾರಿ ಅಂಗಡಿಗಳು ಮಾತ್ರ ಬೆಳಿಗ್ಗೆ೬:೦೦ ರಿಂದ ೧೦ ಕನಕ ನಿಯಮಾವಳಿ ಪ್ರಕಾರ ದಿನನಿತ್ಯದ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಹಾಗೂ ಸದರಿ ವೇಳೆಯಲ್ಲಿ ಅಂಗಡಿಗಳ ಮುಂದೆ ಸಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಈ ನಿಬಂಧನೆಗಳನ್ನು ಉಲ್ಲಂಘಿಸಿದವರ ವಿರುದ್ಧ ನಿಮ್ಮ ಮೇಲೆ ಎಫ್.ಐ.ಆರ್. ದಾಖಲಿಸುವುದು ಜೊತೆಗೆ ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆಗೆ ಬರುವವರ ಹಾಗೂ ಗುಂಪುಗುAಪಾಗಿ ಸೇರುವವರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗುವುದು.
ಕೋಳಿ ಮತ್ತು ಮಟನ್ ಅಂಗಡಿಯನ್ನು ಎಂದಿನAತೆ ಓಪನ್ ಮಾಡುವಂತೆ ಸರ್ಕಾರ ಆದೇಶ ನೀಡಿತ್ತು ಆದರೆ ಎಂದಿನoತೆ ಓಪನ್ ಮಾಡಿ ಕ್ಲೀನ್ ಮಾಡಿದ ಕಸವನ್ನು ಎಲ್ಲೆಂದರೆ ಅಲ್ಲೇ ಬಿಸಾಡಿರುವ ದೃಷ್ಯ ಸಾರ್ವಜನಿಕರ ಕಣ್ಣಿಗೆ ಕಂಡುಬAದಿದೆ ಎಂದು ತಿಳಿಸಿದರು.
ಬಸರಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಹಾಲಿಂಗಪ್ಪ ಹಾಗೂ ಬಸರಾಳು ಪಿಎಸ್‌ಐ ಜ. ಜಯಗೌರಿ ಅವರು ಕೋಳಿ ಮಟನ್ ಮಾರಾಟ ಮಾಡುವವರನ್ನು ಹಾಗೂ ದಿನನಿತ್ಯದ ದಿನಸಿ ಅಂಗಡಿ ಮಾಲೀಕರನ್ನು ಕರಿಸಿ ಖಡಕ್ ಎಚ್ಚರಿಕೆ ಕೊಟ್ಟರು.
ಈ ಸಂದರ್ಬದಲ್ಲಿ ನಾಡಕಚೇರಿ ಉಪ ತಾಸಿಲ್ದಾರ್ ತಮ್ಮಯ್ಯ, ಪಿಡಿಒ. ಎಚ್.ಸಿ. ಚಂದ್ರಶೇಖರ್, ಎಚ್. ರಾಮಚಂದ್ರ ಆರೋಗ್ಯ ಸಹಾಯಕರು ಹಾಗೂ ನಟರಾಜ್ ಹೆಲ್ತ್ ಇನ್ಸ್ಪೆಕ್ಟರ್ ಹಾಗೂ ಶ್ರೀ ಶಕ್ತಿ ಕಾರ್ಯ ನಿರ್ದೇಶಕರು ರಮ್ಯ, ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಹಾಗೂ ಮುಂತಾದವರು ಸಭೆಗೆ ಹಾಜರಾದರು.

error: