ನಾಗಮಂಗಲ ಬೆಳ್ಳೂರು ಪಟ್ಟಣ ಪಂಚಾಯಿತಿ ವತಿಯಿಂದ ಆಹಾರಧಾನ್ಯ ವಿತರಕರು ತರಕಾರಿ.ಹಣ್ಣು. ವಿತರಕರು ಗಳಿಗೆ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕರೋನ ವೈರಸ್ ಸಮಿತಿ ವತಿಯಿಂದ ಮುಖ್ಯ ಅಧಿಕಾರಿಗಳು ನೇತೃತ್ವದಲ್ಲಿ ಸಭೆ ಕರೆದು ಖಡಕ್ ಎಚ್ಚರಿಕೆ ನೀಡಲಾಯಿತು
ಕರೋನ ವೈರಸ್ ಹರಡಿರುವ ಹಿನ್ನೆಲೆಯಲ್ಲಿ ಆಹಾರಧಾನ್ಯ ವಿತರಕರು ಯಾವುದೇ ಪದಾರ್ಥವಾದರೂ ನಿಗದಿತ ಬೆಲೆಗೆ ಮಾರಾಟ ಮಾಡಬೇಕು ಗ್ರಾಹಕರಿಂದ ಹೆಚ್ಚುವರಿ ಹಣವನ್ನು ಪಡೆದರೆ ಅಂಗಡಿಗಳನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಿಜ್ ಮಾಡಲಾಗುವುದು ಎಂದು ತಾಲ್ಲೂಕು ಕರೋನ ವೈರಸ್ ಸಮಿತಿಯ ವತಿಯಿಂದ ಪಟ್ಟಣದ ವರ್ತಕರಿಗೆ ಖಡಕ್ ಸಂದೇಶ ರವಾನಿಸಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿ ಆರ್.ವಿ ಮಂಜುನಾಥ್, ಈ ಸಮಯದಲ್ಲಿ ವರ್ತಕರು ಲಾಭದ ದೃಷ್ಟಿಯಿಂದ ವ್ಯಾಪಾರ ಮಾಡಬಾರದು ಪ್ರತಿಯೊಬ್ಬರ ಬದುಕು ಮುಖ್ಯ ಆದ್ದರಿಂದ ಮಾನವೀಯ ಮೌಲ್ಯಗಳಿಂದ ವರ್ತಿಸಿ ರೈತರ ಬದುಕು ಹಸನಾಗಬೇಕು ನಾವು ಕೂಡ ಪಟ್ಟಣ ಪಂಚಾಯಿತಿ ಆಡಳಿತ ವತಿಯಿಂದ ನಿಮ್ಮೆಲ್ಲರ ಸೇವೆ ಸಲ್ಲಿಸುತ್ತಿದ್ದೇವೆ ಇಲ್ಲಿ ಯಾರು ಕೀಳು ಮತ್ತು ಮೇಲು ಎಂಬುದಿಲ್ಲ ಎಲ್ಲರೂ ಕೂಡ ಸರಿಸಮಾನರು ದಿನನಿತ್ಯದ ಆಹಾರ ಪದಾರ್ಥಗಳನ್ನು ನಿಗದಿತ ಬೆಲೆ ಅದರ ಪಟ್ಟಿ ಪ್ರಕಟಿಸಿ ಮಾರಾಟ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವರ್ತಿಸಿ ಪಟ್ಟಣ ಪಂಚಾಯಿತಿ ಆಡಳಿತದ ನೀತಿ-ನಿಯಮಗಳನ್ನು ಉಲ್ಲಂಘಿಸಿ ಆಹಾರ ಪದಾರ್ಥಗಳ ಹೆಚ್ಚುವರಿಯಾಗಿ ಮಾರಾಟ ಮಾಡಿದರೆ ಅಂಗಡಿಗಳನ್ನು ಸೀಜ್ ಮಾಡಿ ಕಾನೂನುಕ್ರಮ ಜರುಗಿಸಬೇಕಾಗುತ್ತದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್ ವಿ ಮಂಜುನಾಥ, ಉಪ ತಹಶೀಲ್ದಾರ್ ಬಿ.ಎಸ್ ಭಗವಾನ್, ಹಾಗೂ ಪಿಎಸ್‌ಐ ದಯಾನಂದ ಹಾಜರಿದ್ದರು.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ