May 23, 2024

Bhavana Tv

Its Your Channel

೬ ವರ್ಷಸ ಬಲಕಿಯಿಂದ ಕೊರೊನೊ ಪರಿಹಾರಕ್ಕಾಗಿ ಪ್ರಧಾನಮಂತ್ರಿ ನಿಧಿಗೆ ದೇಣಿಗೆ ತಾನು ಕೂಡಿಟ್ಟಿದ್ದ ಗೋಲಕ ಹಣವನ್ನು ದೇಣಿಗೆ ನೀಡಿ ಮಾದರಿ ಆದ ಬಾಲಕಿ.

ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ೬ ವರ್ಷದ “ಪುಣ್ಯ” ಎಂಬ ಬಾಲಕಿ ತಾನು ಒಂದು ವರ್ಷ ಗೋಲಕದಲ್ಲಿ ಪೈಸೆ ಪೈಸೆ ಕೂಡಿಟ್ಟಿದ್ದ ಹಣವನ್ನು ಕೊರೊನಾ ವೈರಸ್ ತಡೆಗಟ್ಟಲು ಹಾಗೂ ಪರಿಹಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಪರಿಹಾರ ನಿಧಿಗೆ ಹಸ್ತಾಂತರಿಸಿದ್ದಾಳೆ.

ಮAಡ್ಯ ಜಿಲ್ಲೆ ಪಾಂಡವಪುರ ತಾಲೂಕು ಪಂಚಾಯತ ಬಿಜೆಪಿ ಸದಸ್ಯೆ ಮಂಗಳ ನವೀನ್ ಕುಮಾರ್ ಹಾಗೂ ಬಿಜೆಪಿ ಮುಖಂಡ ನವೀನ್ ಕುಮಾರ್ ದಂಪತಿಯ ಪುತ್ರಿ ಪುಣ್ಯಳಿಂದ ಕೂಡಿಟ್ಟಿದ್ದ ಗೋಲಕ ಹಣವನ್ನು ಬಿಜೆಪಿ ಜಿಲ್ಲಾ ಮುಖಂಡ ನಾಗಣ್ಣಗೌಡ, ಪಾಂಡವಪುರ ತಾಲೂಕು ಬಿಜೆಪಿ ಅಧ್ಯಕ್ಷ, ಪುರಸಭೆ ಸದಸ್ಯ ಎಲ್.ಅಶೋಕ್ ಮೂಲಕ ಪ್ರಧಾನಮಂತ್ರಿ ನಿಧಿಗೆ ಹಣವನ್ನು ದೇಣಿಗೆ ನೀಡಲು ಹಸ್ತಾಂತರ ಮಾಡಲಾಯಿತು.

ಪುಣ್ಯ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಭಿಮಾನಿಯಾಗಿದ್ದೇನೆ. ಕೊರೊನೊ ವೈರಸ್ ಹರಡದಂತೆ ಎಲ್ಲರೂ ಜಾಗೃತರಾಗಿ ದಯವಿಟ್ಟು ಮನೆಯಲ್ಲೇ ಇರಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾಳೆ.

error: