June 20, 2024

Bhavana Tv

Its Your Channel

ಸನ್ ಪ್ಯೂರ್ ಆಯಿಲ್ ಕಂಪನಿಯಿOದ ನಾಗಮಂಗಲ ಹೋಂ ಗಾರ್ಡ್ಸ್ ಗಳಿಗೆ ಫುಟ್ ಕಿಟ್ ವಿತರಣೆ

ನಾಗಮಂಗಲ: ಕೋವಿಡ್-೧೯ ಹರಡದಂತೆ ಅಗತ್ಯಕ್ರಮವಾಗಿ ಕೇಂದ್ರ ಸರ್ಕಾರ ಮೇ ೩ ರವರೆಗೆ ಎರಡನೇ ಹಂತದ ಲಾಕ್ ಡೌನ್ ಅನ್ನು ಮುಂದುವರಿಸಿರುವುದರಿoದ ಪೊಲೀಸ್ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಹೋಂ ಗಾಡ್ಸ್ ಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಶ್ರೀರಂಗಪಟ್ಟಣದ ಸನ್ ಪ್ಯೂರ್ ಆಯಿಲ್ ಕಂಪೆನಿ ವತಿಯಿಂದ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ನಂತರ ಮಾತನಾಡಿದ ತಾಲೂಕು ದಂಡಾಧಿಕಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡನೇ ಹಂತದ ಲಾಕ್ ಡೌನ್ ಅನ್ನು ಮುಂದುವರಿಸಿದ್ದು,ಕೋವಿಡ್-೧೯ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯು ಹೋಂ ಗಾರ್ಡ್ಸ್ ಗಳಿಗ್ಗೆ ಸನ್ ಪ್ಯೂರ್ ಆಯಿಲ್ ಕಂಪೆನಿ ದಿನಸಿ ಕಿಟ್ ವಿತರಿಸುತ್ತಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ನಿಮ್ಮಿಂದ ನೆರವು ಸಿಗಲಿ ಎಂದು ಮನವಿ ಮಾಡಿದರು.

ತಹಶೀಲ್ದಾರ್ ಕುಂಞ ಅಹಮದ್, ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಅನಂತರಾಜು,ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಡಿವೈಎಸ್ಪಿ ವಿಶ್ವನಾಥ್, ಸಿಪಿಐ ರಾಜೇಂದ್ರ, ಪಿಎ??? ರವಿಕಿರಣ್, ಸಿಬ್ಬಂದಿಗಳು ಹಾಜರಿದ್ದರು.

error: