April 18, 2024

Bhavana Tv

Its Your Channel

ಭೂದೇವಿಸಮೇತನಾದ ವರಹನಾಥಸ್ವಾಮಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಪುರಸ್ಕಾರ

ಕೆ.ಆರ,ಪೇಟೆ : ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವೈಕುಂಠ ಎಂದೇ ಪ್ರಖ್ಯಾತವಾಗಿರುವ ವರಹನಾಥ ಕಲ್ಲಹಳ್ಳಿಯಲ್ಲಿ ನೆಲೆಸಿರುವ ಭೂದೇವಿಸಮೇತನಾದ ವರಹನಾಥಸ್ವಾಮಿಗೆ ವರಹಾಜಯಂತಿಯ ಅಂಗವಾಗಿ ಅಭಿಷೇಕ ಹಾಗೂ ವಿಶೇಷ ಪೂಜೆ ಪುರಸ್ಕಾರಗಳು ನಡೆದವು …

ದೇಶದಲ್ಲಿಯೇ ಅಪರೂಪದ್ದಾಗಿರುವ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಿರುವ ೧೭ ಅಡಿ ಎತ್ತರದ ಏಕಶಿಲೆಯ ವರಾಹನಾಥಸ್ವಾಮಿಯ ಮೂರ್ತಿಗೆ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್ ಅವರ ನೇತೃತ್ವದಲ್ಲಿ ವಿಶೇಷವಾದ ಅಭಿಷೇಕ ನಡೆಸಿ ಲೋಕವನ್ನು ಕೊರೋನಾ ಸಂಕಷ್ಠದಿAದ ಮುಕ್ತಗೊಳಿಸಿ ವಿಶ್ವಶಾಂತಿ ಹಾಗೂ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಯಿತು.

೧೭ ಅಡಿ ಎತ್ತರದ ಭೂವರಾಹಸ್ವಾಮಿಯ ಮೂರ್ತಿಗೆ ೧ಸಾವಿರ ಲೀಟರ್ ಹಾಲು, ೫೦೦ಲೀ ಕಬ್ಬಿನಹಾಲು, ೫೦೦ಲೀ ಎಳನೀರು, ಪವಿತ್ರ ಗಂಗಾಜಲ, ಶ್ರೀಗಂಧ, ಅರಿಶಿನ, ಜೇನುತುಪ್ಪದಿಂದ ಅಭಿಷೇಕ ಮಾಡಿದ ನಂತರ ಮಲ್ಲಿಗೆ, ಸಂಪಿಗೆ, ಸುಗಂಧರಾಜ, ಕಾಕಡ, ಕನಕಾಂಬರ, ಕಮಲ, ಸೇವಂತಿಗೆ, ಗುಲಾಬಿ, ಸೂಜಿಮಲ್ಲಿಗೆ, ಪವಿತ್ರ ಪತ್ರೆಗಳು, ತುಳಸಿ, ತಾವರೆಹೂ, ಲಿಲ್ಲಿ, ಜಾಜಿ, ಪಾರಿಜಾತ ಸೇರಿದಂತೆ ೫೮ ಬಗೆಯ ವಿವಿಧ ಅಪರೂಪದ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು. ಮೈಸೂರಿನ ಪರಕಾಲ ಮಠದ ಪೂಜ್ಯ ಶ್ರೀಗಳು ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊರೋನಾ ನಿರ್ಮೂಲನೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ದೇವಾಲಯದ ದಾಸೋಹ ಭವನದ ವತಿಯಿಂದ ಸಂಕಷ್ಠದಲ್ಲಿರುವ ಬಡಜನರು ಹಾಗೂ ನಿರ್ಗತಿಕರಿಗೆ ಕೊರೋನಾ ಲಾಕ್ ಡೌನ್ ಸಮಯದಿಂದಲೂ ಪ್ರತಿದಿನವೂ ಕನಿಷ್ಠ ೨ ಸಾವಿರ ಜನರಿಗೆ ಮಧ್ಯಾಹ್ನದ ಊಟವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದ್ದು ಇಂದೂ ಸಹ ಪೊಂಗಲ್ ಹಾಗೂ ಮೊಸರನ್ನವನ್ನು ವಿತರಿಸಲಾಯಿತು.

ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಮುಖಂಡ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೋದರಳಿಯ ಸಿಂದಘಟ್ಟ ಅರವಿಂದ್, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಶ್ರೀರಂಗಪಟ್ಟಣ ಸಂತೋಷ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಗಾಯತ್ರಿ, ಗಂಜಿಗೆರೆ ಗ್ರಾ.ಪಂ ಅಧ್ಯಕ್ಷೆ ವೀರಾಜಮ್ಮ, ಬಿಜೆಪಿ ಮುಖಂಡರಾದ ಬೂಕಹಳ್ಳಿ ಮಂಜು, ಬೂಕನಕೆರೆ ಮಧುಸೂದನ್, ಸಾಸಲು ನಾಗೇಶ್, ಯುವ ಮುಖಂಡರಾದ ಶ್ರೀಧರಸಿರಿವಂತ್, ಗಂಜಿಗೆರೆ ವಿಜಯಕುಮಾರ್, ಸತೀಶ್ ಬೋರೇಗೌಡ ಮತ್ತಿತರರು ಭಾಗವಹಿಸಿದ್ದರು.

ವಿಶೇಷ ವರದಿ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ….

error: