ಕೃಷ್ಣರಾಜಪೇಟೆ ; ಕಳಪೆ ಗುಣಮಟ್ಟದ ಜಂಕ್ ಫುಡ್, ಕುರ್ ಕುರೆ ಹಾಗೂ ಬೋಟಿ ಮಾರಾಟ ಅಂಗಡಿಗಳ ಮೇಲೆ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮತ್ತು ಆರೋಗ್ಯ ಸಿಬ್ಬಂಧಿಗಳ ದಾಳಿ ನಡೆಸಿ ಅಂಗಡಿಗಳಿಗೆ ಬೀಗ ಮುದ್ರೆ ಹಾಕಿದ್ದಾರೆ.
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಜಂಕ್ ಫುಡ್ ಗಳು, ತಂಬಾಕು ಉತ್ಪನ್ನಗಳು, ಬೀಡಿ ಸಿಗರೇಟು ಮಾರಾಟ ಮಾಡುತ್ತಿದ್ದ ಓಂ ಸ್ಟೋರ್, ಶ್ರೀ ಲಕ್ಷ್ಮೀ ಸ್ಟೋರ್ ಹಾಗೂ ಪೂಜಾ ಸ್ಟೋರ್ ಗಳ ಮೇಲೆ ಪುರಸಭೆಯ ಆರೋಗ್ಯ ಸಿಬ್ಬಂಧಿಗಳು ಹಾಗೂ ಪೋಲಿಸರು ದಾಳಿ ನಡೆಸಿ ಕಳಪೆ ಗುಣಮಟ್ಟದ ಜಂಕ್ ಫುಡ್ ಹಾಗೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ಪುರಸಭೆಯ ಸಿಬ್ಬಂಧಿಗಳು ಹಾಗೂ ಪೋಲಿಸರು ಅಂಗಡಿಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸಿ ಅಂಗಡಿಗಳಿಗೆ ಬೀಗಮುದ್ರೆ ಹಾಕಿದ್ದಾರೆ…
ಪ್ಲಾಸ್ಟಿಕ್ ಮಿಶ್ರಿತ ಕಳಪೆ ಗುಣಮಟ್ಟದ ಬೋಟಿ ಮಾರಾಟ, ಕಳಪೆ ಗುಣಮಟ್ಟದ ಜಂಕ್ ಫುಡ್ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರನ್ನು ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ತರಾಟೆಗೆ ತೆಗೆದುಕೊಂಡರು.
ದಾಳಿಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಪರಿಸರ ಎಂಜಿನಿಯರ್ ರಕ್ಷಿತಗೌಡ, ಆರೋಗ್ಯ ಪರಿವೀಕ್ಷಕರಾದ ಅಶೋಕ್, ನರಸಿಂಹಶೆಟ್ಟಿ, ಮಂಟೇಮAಜು, ಶಾರದಾ, ನಾರಾಯಣ, ಮುತ್ತಣ್ಣ ಮತ್ತಿತರರು ಭಾಗವಹಿಸಿದ್ದರು.
ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ….
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ