November 30, 2023

Bhavana Tv

Its Your Channel

ಪೌರಕಾರ್ಮಿಕರಿಗೆ ಕೃಷ್ಣರಾಜಪೇಟೆ ಪುರಸಭೆಯ ವತಿಯಿಂದ ಡೆಟಾಲ್ ಸೋಪು ಮತ್ತು ಸ್ಯಾನಿಟೈಸರ್

ಕೊರೋನಾ ಮಹಾಮಾರಿಯ ಅಟ್ಟಹಾಸ ಹಾಗೂ ಭೀತಿಯ ನಡುವೆಯೂ ತಮ್ಮ ಜೀವದ ಹಂಗು ತೊರೆದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದುಡಿಯುತ್ತಾ ಸ್ವಚ್ಛತೆಯ ಕೆಲಸದಲ್ಲಿ ಭಾಗಿಯಾಗಿರುವ ಪೌರಕಾರ್ಮಿಕರಿಗೆ ಕೃಷ್ಣರಾಜಪೇಟೆ ಪುರಸಭೆಯ ವತಿಯಿಂದ ಡೆಟಾಲ್ ಸೋಪು ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.

ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್, ಪರಿಸರ ಎಂಜಿನಿಯರ್ ರಕ್ಷಿತ್ ಗೌಡ ಮತ್ತು ಹಿರಿಯ ಆರೋಗ್ಯ ನಿರೀಕ್ಷಕರಾದ ಅಶೋಕ್ ಪೌರಕಾರ್ಮಿಕರಿಗೆ ಸ್ಯಾನಿಟೈಸರ್ ಮತ್ತು ಸೋಪನ್ನು ವಿತರಿಸಿದರು.

ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ಮಟ್ಟಹಾಕುವ ನಿಟ್ಟಿನಲ್ಲಿ ವ್ಯಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪೌರಕಾರ್ಮಿಕರಿಗೆ ಸತೀಶ್ ಕುಮಾರ್ ಮನವಿ ಮಾಡಿ ಆರೋಗ್ಯ ಜಾಗೃತಿ ಮೂಡಿಸಿದರು.

ಇದೇ ಸಂದರ್ಭದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೆಮಿಕಲ್ ಸಿಂಪರಣಾ ಯಂತ್ರ ಮತ್ತು ಒಂದು ಚೀಲ ಬ್ಲೀಚಿಂಗ್ ಪೌಡರ್ ಅನ್ನು ವಿತರಿಸಲಾಯಿತು…

ಈ ಸಂದರ್ಭದಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಟೇಮAಜು, ಮುಖಂಡ ಕೃಷ್ಣ, ಆರೋಗ್ಯ ಪರಿವೀಕ್ಷಕ ನರಸಿಂಹಶೆಟ್ಟಿ, ಮುತ್ತಣ್ಣ , ಶಾರದಾ ಮತ್ತಿತರರು ಉಪಸ್ಥಿತರಿದ್ದರು…

ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ..

error: