May 3, 2024

Bhavana Tv

Its Your Channel

ದಿವಂಗತ ಮಹೇಂದ್ರ ಸಿ ಎಸ್ ರವರ ಹುಟ್ಟು ಹಬ್ಬ ಅರ್ಥಪೂರ್ಣವಾಗಿ ಆಚರಣೆ

ಕಿಕ್ಕೇರಿ:– ನರೇಗಾ ಇಂಜಿನಿಯರ್ ಆದ ದಿವಂಗತ ಮಹೇಂದ್ರ ಸಿ ಎಸ್ ರವರ ಸವಿ ನೆನಪಿನಲ್ಲಿ ಅವರ ಹುಟ್ಟು ಹಬ್ಬವನ್ನು ಅಂಗವಾಗಿ ಮೂರು ಸಾವಿರ ಗಿಡಗಳನ್ನು ವಿತರಿಸಿದಲ್ಲದೆ. ಮಾತೃ ಭೂಮಿ ವೃದ್ದಾಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಚಿಕ್ಕತರಹಳ್ಳಿ ಗ್ರಾª ಕಾಂತಮ್ಮ ಶ್ರೀನಿವಾಸಮೂರ್ತಿಯ ಸುಪುತ್ರ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ನರೇಗಾ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಹೇಂದ್ರ ಸಿ.ಎಸ್ ರವರು ಕಳೆದ ಐದಾರು ತಿಂಗಳ ಇಂದೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು ಅವರ ಸವಿ ನೆನಪಿನಲ್ಲಿ ಅವರ ಹುಟ್ಟು ಹಬ್ಬವನ್ನು ಮೂರು ಸಾವಿರಕ್ಕೂ ಹೆಚ್ಚು ಗಿಡಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು..

ಅಲ್ಲದೆ ಕುಟುಂಬದ ಸದಸ್ಯರು ಹಾಗೂ ಅವರ ಸಹೋದರ ಮಂಜುನಾಥ್ ಸಿ.ಎಸ್ ರವರು ಸೇರಿದಂತೆ ಸ್ನೇಹಿತರೆಲ್ಲಾ ಮಹೇಂದ್ರ ರವರ ಸವಿ ನೆನಪಿನಲ್ಲ ಶಾಲೆ ಮಕ್ಕಳಿಗೆ ನೋಟ್ ಬುಕ್ ಪಠ್ಯ ಸಾಮಾಗ್ರಿಗಳನ್ನು ವಿತರಿಸಿ.. ಮಾತೃ ಭೂಮಿ ವೃದ್ದಾಶ್ರಮದ ವೃದ್ದರಿಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ನೀಡಿ ಊಟ ವ್ಯವಸ್ಥೆ ಮಾಡಿವ ಮೂಲಕ ಅರ್ಥ ಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು..

ನಂತರ ಮಾತನಾಡಿ ಸಿ.ಎಸ್ ಮಂಜುನಾಥ್ ರವರು ನನ್ನ ಸಹೋದರ ಇಂದು ನಮ್ಮ ಅಗಲಿದ್ದು ಅವರ ಹುಟ್ಟು ಹಬ್ಬ ಈ ದಿನ ಇದ್ದು ಅವರ ಸವಿ ನೆನಪಿನಲ್ಲಿ ಮೂರು ಸಾವಿರದಷ್ಟು ಗಿಡಗಳನ್ನು ವಿತರಣೆ ಮಾಡಲಾಗಿದೆ ಗಿಡ ಪಡೆದವರು ಗಿಡವನ್ನು ನೆಟ್ಟು ಹಾರೈಕೆ ಮಾಡಬೇಕು ಗಿಡವು ದೊಡ್ಡದಾಗಿ ಮರವಾದ ಮೇಲೆ ಪ್ರತಿ ಮರದಲ್ಲೂ ನನ್ನ ಸಹೋದರ ಕಾಣುತ್ತೇನೆ ಎಂದು ಭಾವುಕರಾದರು ..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: