April 27, 2024

Bhavana Tv

Its Your Channel

ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ದ್ರೋಣಾಲಯ ಶಾಲೆಯಲ್ಲಿ ಕೃಷ್ಣ ಮತ್ತು ರಾಧೆಯ ವೇಷ ಭೂಷಣ ಸ್ಪರ್ಧೆ

ಕಿಕ್ಕೇರಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಕ್ಕಳಿಗೆ ಕೃಷ್ಣ ಮತ್ತು ರಾಧೆಯ ವೇಷ ಭೂಷಣ ಸ್ಪರ್ಧೆಯನ್ನು ದ್ರೋಣಾಲಯ ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ದ್ರೋಣಾಲಯ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮವನ್ನು ಕಿಕ್ಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಿತಾ ಹಾಗೂ ಶಾಲೆಯ ಸಂಸ್ಥಾಪಕ ಶಮಂತ್ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಶಾಲಾ ಮಕ್ಕಳು ಕೃಷ್ಣ ಹಾಗೂ ರಾಧೇಯ ವೇಷಭೂಷಣ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಮಕ್ಕಳನ್ನು ನೋಡಿ ಪೋಷಕರು ಮಕ್ಕಳ ಪೋಟೋ ತೆದುಕೊಂಡು, ಮನರಂಜನೆ ಪಡೆದುಕೊಂಡರು

ನAತರ ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಶಮಂತ್ ಮಾತನಾಡಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಕೂಡ ಒಂದು. ಇದನ್ನು ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀಜಯಂತಿ ಎಂದೂ ಕರೆಯಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯು ಕೃಷ್ಣನ ಜನ್ಮದಿನವನ್ನು ಸೂಚಿಸುತ್ತದೆ ಅದೇ ರೀತಿ ನಮ್ಮ ಶಾಲೆಯಲ್ಲಿ ಮಕ್ಕಳ ಸ್ಪರ್ದೆ ಆಯೋಜನೆ ಮಾಡಿದ್ದು ಸ್ಪರ್ದೆಯಲ್ಲಿ ಭಾಗವಹಿಸಿ ಉತ್ತಮವಾಗಿ ವೇಷಭೂಷಣ ಧರಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದ್ದೇವೆ ಎಂದರು..

ಕಾರ್ಯಕ್ರಮದಲ್ಲಿ ದ್ರೋಣಾಲಯ ಶಾಲೆಯ ಸಂಸ್ಥಾಪಕರಾದ ಶಂಮತ್, ಶಿಕ್ಷಕರಾದ ರಮ್ಯ, ದೀಪುಕುಮಾರಿ, ವೀಣಾ, ಉಶಾ ರಾಣಿ, ಆಪೀಯಾ, ಸೇರಿದಂತೆ ಮಕ್ಕಳ ಪೋಷಕರುಗಳು ಭಾಗವಹಿಸಿದರು..

ವರದಿ: ಶಂಭು ಕಿಕ್ಕೇರಿ

error: