July 14, 2024

Bhavana Tv

Its Your Channel

ಕಿಕ್ಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರಿಗೆ ಕಿಟ್ ವಿತರಣೆ.

ಮಂಡ್ಯ: ಮಂಡ್ಯ ಜಿಲ್ಲೆಯ ಕಿಕ್ಕೇರಿ ಪಟ್ಟಣದ ವರ್ಷ ಕ್ಲೀನಿಕ್‌ನಲ್ಲಿ ಖಾಸಗಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾಂಗ್ರೆಸ್ ಜಿಲ್ಲಾ ವಕ್ತಾರರು ಹಾಗೂ ವೈದ್ಯರಾದ ಡಾ|| ರಾಮಕೃಷ್ಣೇಗೌಡ್ರು ದಾದಿಯರಿಗೆ ಕಿಟ್ ವಿತರಿಸಿ ಮಾತನಾಡಿ ಸಮಾಜದಲ್ಲಿ ಕೊರೋನಾ ವೈರಸ್ ವಿರುದ್ದ ಹಗಲಿರುಳು ತಮ್ಮ ಪ್ರಾಣದ ಹಂಗು ತೊರೆದು ವೈದ್ಯರು ಹಾಗೂ ದಾದಿಯರು, ಆಸ್ಪತ್ರೆ ಸಿಬ್ಬಂದಿಗಳು ಹೋರಾಟ ಮಾಡುತ್ತಿದ್ದಾರೆ. ..ರಾಜ್ಯದ ಎಲ್ಲಾ ವೈದರು ಹಾಗೂ ದಾದಿಯರು ಆಸ್ಪತ್ರೆ ಸಿಬ್ಬಂದಿಗಳು ಜಾಗೃತವಾಗಿ ಕೆಲಸ ನಿರ್ವಹಿಸಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಗ್ಲೌಸ್, ಸ್ಯಾನಿಟೇಜರ್ ಬಳಕೆ ಮಾಡಬೇಕು ಪ್ರತಿ ರೋಗಿಗಳನ್ನು ಪರಿಶೀಲನೆ ಮಾಡುವಾಗ ಜಾಗೃತವಾಗಿ ಕೆಲಸ ನಿರ್ವಹಿಸುವಂತೆ ತಿಳಿಸಿದರು..
ಈ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯದಿಕಾರಿಗಳಾದ ಡಾ|| ಸತೀಶ್, ಲ್ಯಾಬ್ ಟೆಕ್ನಿಶಿಯನ್ ರಂಗಣ್ಣ, ಅಥರ್ವ ಮೆಡಿಕಲ್ ಮಾಲಿಕರಾದ ಪ್ರಭಕಾರ್, ಅಥರ್ವ ಲ್ಯಾಬ್ ಟೆಕ್ನಿಶಿಯನ್ ವಿಜಯ್, ಸೇರಿದoತೆ ಹಲವರು ಇದ್ದರು…

error: