September 16, 2024

Bhavana Tv

Its Your Channel

ಕೊರೋನಾ ಸಂಕಷ್ಠದಲ್ಲಿರುವ ಬಡಜನರಿಗೆ ಹಾಗೂ ಕೃಷಿಕೂಲಿ ಕಾರ್ಮಿಕರಿಗೆ ಕೈಲಾದ ಸಹಾಯವನ್ನು ಮಾಡಬೇಕು ಎಂದು ಮನವಿ- ಮತ್ತಿಘಟ್ಟ ಕೃಷ್ಣಮೂರ್ತಿ

ಮಂಡ್ಯ: ಕೊರೋನಾ ಸಂಕಷ್ಠದ ಸಮಯದಲ್ಲಿ ಉಳ್ಳವರು ಬಡಜನರು ಹಾಗೂ ಆರ್ಥಿಕವಾಗಿ ಸಂಕಷ್ಠದಲ್ಲಿರುವ ಕೃಷಿಕೂಲಿ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕು ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಮಾಜಿಅಧ್ಯಕ್ಷ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರಾದ ಮತ್ತಿಘಟ್ಟ ಕೃಷ್ಣಮೂರ್ತಿ ಮನವಿ ಮಾಡಿದರು. ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಜಾಗಿನಕೆರೆ, ದೊಡ್ಡಹಾರನಹಳ್ಳಿ, ಬಿಲ್ಲೇನಹಳ್ಳಿಯ ಗವಿರಂಗಪ್ಪನ ದೇವಸ್ಥಾನ,
ಹುಬ್ಬನಹಳ್ಳಿ, ಸೋಲಿಗರಕೊಪ್ಪಲು, ಕೃಷ್ಣರಾಜಪೇಟೆ ಪಟ್ಟಣದ ಮುಸ್ಲಿಂ ಬ್ಲಾಕ್ ಮತ್ತು ಹೇಮಾವತಿ ಬಡಾವಣೆಯ ೫೦೦ಕ್ಕೂ ಹೆಚ್ಚಿನ ಬಡಜನರಿಗೆ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು..ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಇಡೀ ದೇಶವೇ ಸಂಕಷ್ಠಕ್ಕೆ ಸಿಲುಕಿ ತತ್ತರಿಸಿಹೋಗಿದೆ. ಆದ್ದರಿಂದ ಜನಸಾಮಾನ್ಯರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮುಖಕ್ಕೆ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡು ಕೈಗಳನ್ನು ಸ್ಯಾನಿಟೈಸರ್‌ನಿಂದ ಚೆನ್ನಾಗಿ ಕೈ ತೊಳೆದುಕೊಂಡು ವೆಯಕ್ತಿಕ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಎಂ.ಡಿ.ಕೃಷ್ಣಮೂರ್ತಿ ಮನವಿ ಮಾಡಿದರು…ಕೃಷ್ಣರಾಜಪೇಟೆ ತಾಲ್ಲೂಕಿಗೆ ನೂರಾರು ಮುಂಬೈ ಕನ್ನಡಿಗರು ಹಾಗೂ ಹೊರರಾಜ್ಯಗಳ ನಿವಾಸಿಗಳು ಕೊರೋನಾ ಸಂಕಷ್ಠದ ಹಿನ್ನೆಲೆಯಲ್ಲಿ ಹುಟ್ಟೂರುಗಳಿಗೆ ಆಗಮಿಸುತ್ತಿದ್ದಾರೆ. ಹೊಟ್ಟೆಪಾಡು ಮತ್ತು ಜೀವನ ನಿರ್ವಹಣೆಗಾಗಿ ಮುಂಬೈ ಮಹಾನಗರ ಸೇರಿದಂತೆ ಹೊರರಾಜ್ಯಗಳಿಗೆ ಹೋಗಿ ನೆಲೆಸಿರುವ ಬಂಧುಗಳು ಅಣ್ಣತಮ್ಮಂದಿರು ಎಂಬ ಸತ್ಯ ಅರಿಯಬೇಕು.. ಮುಂಬೈನಿoದ ಆಗಮಿಸುವ ಜನರನ್ನು ವಸತಿನಿಲಯಗಳು ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಹೋಂ ಕ್ವಾರಂಟೈನ್ ಮಾಡಲು ಅಡ್ಡಿಪಡಿಸಬಾರದು..ಮುಂಬೈನಿoದ ಆಗಮಿಸುವ ಬಂಧುಗಳು ಕಡ್ಡಾಯವಾಗಿ ಕೊರೋನಾ ಟೆಸ್ಟ್ಗೆ ಒಳಗಾಗಿ ಚಿಕಿತ್ಸಾ ಫಲಿತಾಂಶ ನೆಗೆಟಿವ್ ಬಂದ ನಂತರವಷ್ಟೇ ಊರಿಗೆ ಬರಬೇಕು. ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ತಾಲೂಕಿನ ಜಾಗಿನಕೆರೆ, ಮರುವನಹಳ್ಳಿ, ಹೊನ್ನೇನಹಳ್ಳಿ ಮತ್ತು ರಾಜಘಟ್ಟದ ಜನರು ಎಚ್ಚರಿಕೆಯಿಂದ ಜೀವನ ನಡೆಸಬೇಕು. ಕಡ್ಡಾಯವಾಗಿ ಆರೋಗ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಕೈಮುಗಿದು ಮನವಿ ಮಾಡಿದರು…

ಈ ಸಂದರ್ಭದಲ್ಲಿ ತಾಲ್ಲೂಕಿನ ಯುವಕಾಂಗ್ರೆಸ್ ಅಧ್ಯಕ್ಷ ಚೇತನಕುಮಾರ್, ಸಂತೇಬಾಚಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹುಬ್ಬನಹಳ್ಳಿಕುಮಾರ್, ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಮುಖಂಡರಾದ ಎಲ್.ಐ.ಸಿ ಜಗಧೀಶ್, ಗೊರವಿ ಕುಮಾರ್, ತಾಲ್ಲೂಕು ಕುರುಬ ಸಮಾಜದ ಮುಖಂಡ ಕುಮಾರ್, ಬಂಕ್ ರವಿ, ಅಕ್ಕಿಹೆಬ್ಬಾಳು ದಿವಾಕರ್, ಕರೋಟಿ ಪುಟ್ಟರಾಜು ಮತ್ತಿತರರು ಭಾಗವಹಿಸಿದ್ದರು….

error: