April 26, 2024

Bhavana Tv

Its Your Channel

ಉಚಿತ ದಂತ ತಪಾಸಣಾ ಶಿಬಿರ

ಕಿಕ್ಕೇರಿ: ಜಿಲ್ಲಾ ಆಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ, ನ್ಯಾಷನಲ್ ಓರಲ್ ಹೆಲ್ತ್ ಪಾಲಿಸಿ ದಂತ ಭಾಗ್ಯ ಯೋಜನೆ, ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ , ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಶಿಬಿರ ವು ನಡೆಯಿತು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಸರ್ಕಾರಿ ಫದವಿ ಪೂರ್ವ ಕಾಲೇಜು ಆವರಣದಲ್ಲಿ ಸುಮದಾಯ ಆರೋಗ್ಯ ಕೇಂದ್ರ ಕಿಕ್ಕೇರಿ ಮತ್ತು ರಾಜರಾಜೇಶ್ವರಿ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಬೆಂಗಳೂರು ಇವರಿಂದ ಉಚಿತ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜನೆ ಮಾಡಿ ನೂರಾರು ಸಾರ್ವಜನಿಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳ ದಂತ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು..

ನಂತರ ಕಿಕ್ಕೇರಿ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ದಂತ ವೈದ್ಯರಾದ ಸುಪ್ರೀತ್, ಡಾಕ್ಟರ್ ಅರುಣನಂತ ರವರು ಮಾತನಾಡಿ ಮನುಷ್ಯನಿಗೆ ಹಲ್ಲು ಸಹ ಮುಖ್ಯ ಅಂಗವಾಗಿದ್ದು ಹಲ್ಲುಗಳನ್ನು ಸುರಕ್ಷಿತ ಹೆಚ್ಚು ಗಮನ ಹರಿಸಬೇಕು ಪ್ರತಿಯೊಬ್ಬರು ಪ್ರತ್ಯೇಕ ಬ್ರಷ್‌ನಲ್ಲಿ ಹಲ್ಲು ಉಜ್ಜುವು ಅಭ್ಯಾಸ ಇಟ್ಟಿಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಬೆಳಗ್ಗೆ ಮತ್ತು ರಾತ್ರಿ ತಪ್ಪದೆ ಬ್ರಷ್ ಮಾಡುವುದರಿಂದ ತಮ್ಮ ಹಲ್ಲುಗಳು ಸುರಕ್ಷಿತ ಇರುವುದು ಎಂದು ಸಲಹೆ ನೀಡಿದ್ರು…

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಕೆ ಎಸ್ ಪ್ರಭಾಕರ್, ಹಿರಿಯ ದಂತ ವೈದ್ಯಾಧಿಕಾರಿಗಳಾದ ಸುಪ್ರೀತ್, ಜಿಲ್ಲಾ ಎನ್.ಓ. ಹೆಚ್.ಸಿ. ಕಾರ್ಯಕ್ರಮದ ಅಧಿಕಾರಯಾದ ಡಾಕ್ಟರ್ ಅರುಣನಂದ, ಮುಖ್ಯ ಆಡಳಿತ ವೈದ್ಯಾದಿಕಾರಿ ಸತೀಶ್, ಡಾಕ್ಟರ್ ಪುಟ್ಟಸ್ವಾಮಿ, ಡಾಕ್ಟರ್ ಕೋಮಲ, ಹಲವು ವೈದ್ಯರು, ಕಿಕ್ಕೇರಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಸಹಾಯಕರು ಆಶಾ ಕಾರ್ಯಕರ್ತೆಯರು, ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: