December 22, 2024

Bhavana Tv

Its Your Channel

ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಯುವಕ ಕೆಲಸ ಕಳೆದುಕೊಳ್ಳುತ್ತೆನೆಂದು ಭೀತಿಯಿಂದ ಆತ್ಮಹತ್ಯೆ.

ಕುಮಟಾ ; ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಊರಿಗೆ ಬಂದಿದ್ದ ಯುವಕನೋರ್ವ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಳ್ಳುವ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿತ್ರಿಗಿಯ ಮಿಡ್ಲಗುಂದದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ರಾಜೇಶ ಮಾದೇವ ಪಟಗಾರ(೨೮) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ೬ ವರ್ಷದಿಂದ ಬೆಂಗಳೂರಿನ ಮಡಿವಾಳದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ ಪಟಗಾರ ತನ್ನ ಅಣ್ಣನ ಮದುವೆ ನಿಮಿತ್ತ ಮಾ. ೯ ರಂದು ಊರಿಗೆ ಬಂದಿದ್ದರು. ಮದುವೆ ಮುಗಿಸಿ ಮಾ. ೨೩ ರಂದು ಮರಳಿ ಉದ್ಯೋಗಕ್ಕೆ ಹೋಗಬೇಕಾಗಿತ್ತು. ಲಾಕ್‌ಡೌನ್‌ನಿಂದ ಬೆಂಗಳೂರಿಗೆ ಹೋಗಲಾಗದೇ ಇದ್ದುದರಿಂದ ಉದ್ಯೋಗ ಕಳೆದುಕೊಳ್ಳುವ ಭವಿಷ್ಯದ ಚಿಂತೆಯಲ್ಲಿ ಮನೆಯ ಬಚ್ಚಲಿನ ಪಕಾಸಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ರಾಜೇಶ ಪಟಗಾರ ಸಹೋದರ ಗಜಾನನ ಮಾದೇವ ಪಟಗಾರ ದೂರಿನಂತೆ ಕುಮಟಾ ಠಾಣೆಯಲ್ಲಿ ಪ್ರಕರಣ

error: