May 2, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮಕ್ಕೆ ಸಚಿವರಾದ ನಾರಾಯಣಗೌಡ ಭೇಟಿ

ಕೃಷ್ಣರಾಜಪೇಟೆ ; ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದಲ್ಲಿ ಕೊರೋನಾ ಸೋಂಕು ಪತ್ತೆಯಾಗಿ ಸೀಲ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಗ್ರಾಮಕ್ಕೆ ಭೇಟಿ ನೀಡಿ ಫುಡ್ ಕಿಟ್ ಗಳನ್ನು ವಿತರಿಸಿ ಗ್ರಾಮಸ್ಥರೊಂದಿಗೆ ಕುಶಲೋಪರಿ ನಡೆಸಿದರು …

ಕೊರೋನಾ ಮಹಾಮಾರಿಯ ಬಗ್ಗೆ ಜನಸಾಮಾನ್ಯರು ಆತಂಕ ಪಡಬೇಕಾಗಿಲ್ಲ…ವಯಕ್ತಿಕ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ಎದುರಿಸಬೇಕು…ಕೊರೋನಾ ಯುದ್ಧದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಆರೋಗ್ಯವಂತ ಸಮಾಜವನ್ನು ನಿರ್ಮಿಸುತ್ತೇವೆ ಎಂವ ಧೃಡ ಆತ್ಮವಿಶ್ವಾಸ ಬೆಳೆಸಿಕೊಳ್ಳಿ ಎಂದು ಗ್ರಾಮಸ್ಥರಿಗೆ ಸಚಿವ ನಾರಾಯಣಗೌಡ ಮನವಿ ಮಾಡಿದರು….

ನಿಮ್ಮೊಂದಿಗೆ ರಾಜ್ಯ ಸರ್ಕಾರವಿದೆ, ಜೊತೆಗೆ ನಾವೂ ಇದ್ದೇವೆ, ನಿಮ್ಮ ಕಷ್ಠಸುಖಗಳಿಗೆ ಪ್ರಾಮಾಣಿಕವಾದ ಸ್ಪಂದನೆಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಆದ್ದರಿಂದ ಆತಂಕಪಡದೇ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಅಗತ್ಯವಾದ ಮುಂಜಾಗರೂಕತಾ ಕ್ರಮಗಳನ್ನು ಪಾಲಿಸಿ ಎಂದು ಮನವಿ ಮಾಡಿದ ಸಚಿವರು ಕೊರೋನಾ ಮಹಾಮಾರಿಯನ್ನು ಎದುರಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕೊರೋನಾ ಸಂಕಷ್ಠವನ್ನು ಎದುರಿಸಲು ರಾಜ್ಯ ಸರ್ಕಾರವು ಸರ್ವ ಸನ್ನದ್ಧವಾಗಿದೆ. ಎಲ್ಲಾ ತಾಲ್ಲೂಕುಗಳಿಗೂ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದೆ ಅಂತೆಯೇ ತಾಲ್ಲೂಕಿಗೆ ೬೦ಲಕ್ಷರೂ ಹಣ ನೀಡಿದೆ. ತಾಲ್ಲೂಕು ಆಡಳಿತ ಈವರೆಗೆ ಕೊರೋನಾ ನಿಯಂತ್ರಣ ಹಾಗೂ ಕ್ವಾರಂಟೈನ್ ನಲ್ಲಿರುವ ಜನರ ಊಟ ವಸತಿಗಾಗಿ ೧೦ಲಕ್ಷರೂ ಹಣ ಖರ್ಚುಮಾಡಿದೆ. ಎಷ್ಟೇ ಹಣ ಖರ್ಚಾದರೂ ರಾಜ್ಯ ಸರ್ಕಾರವು ನೀಡಲು ಬದ್ಧವಾಗಿದೆ.. ಹಣಕ್ಕಾಗಿ ಚಿಂತಿಸುವುದು ಬೇಡ ಧಾರಾಳವಾಗಿ ಹಣ ಖರ್ಚು ಮಾಡಿ ಕ್ವಾರಂಟೈನ್ ಕೇಂದ್ರಗಳಿಗೆ ಗುಣಮಟ್ಟದ ಸೌಲಭ್ಯಗಳನ್ನು ನೀಡಿ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಆದೇಶ ನೀಡಿದರು…

ಸೀಲ್ ಡೌನ್ ಗ್ರಾಮವಾದ ಮರುವನಹಳ್ಳಿ ಜನರಿಗೆ ಫುಡ್ ಕಿಟ್ ವಿತರಣಾ ಕಾರ್ಯದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ, ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಅಗ್ನಿಶಾಮಕ ಅಧಿಕಾರಿ ಶ್ರೀನಿವಾಸರಾವ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ ಮಾಜಿಉಪಾಧ್ಯಕ್ಷ ಎಸ್.ಅಂಬರೀಶ್, ಹರಳಹಳ್ಳಿ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಕರ್ತೇನಹಳ್ಳಿ ಸುರೇಶ್, ಸಚಿವರ ಆಪ್ತಸಹಾಯಕರಾದ ದಯಾನಂದ, ಕಿಕ್ಕೇರಿ ಕುಮಾರ್, ತಾಲ್ಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ಕೆ.ವಿನೋದ್ ಕುಮಾರ್, ಪಿ.ಪ್ರವೀಣ್, ಕೆ.ಆರ್. ಹೇಮಂತಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಆನಂದೇಗೌಡ, ಜಿ.ಪಂ ಮಾಜಿಸದಸ್ಯ ಅಘಲಯಮಂಜುನಾಥ್, ಮುಖಂಡರಾದ ಮರುವನಹಳ್ಳಿ ಸತೀಶ್, ಬಸವರಾಜು, ಸುಬ್ಬುಕೃಷ್ಣ ಮತ್ತಿತರರು ಉಪಸ್ಥಿತರಿದ್ದರು..

ವಿಶೇಷ ವರದಿ. ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ …

error: