April 25, 2024

Bhavana Tv

Its Your Channel

ಮುಖ್ಯಮಂತ್ರಿ ಪರಿಹಾರ ನಿಧಿಗೆ ಮೈಸೂರು ಕ್ಷೇಮಾಭಿವೃದ್ದಿ ಸಂಘದಿ0ದ ೧ ಲಕ್ಷ ದೇಣೆಗೆ

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ಮೈಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೊರೋನಾ ಸಂಕಷ್ಠದ ಸಮಯದಲ್ಲಿ ಮುಖ್ಯಮಂತ್ರಿಗಳ ಕೋವಿಡ್-೧೯ ತಡೆ ಪರಿಹಾರ ನಿಧಿಗೆ ಸಂಗ್ರಹಿಸಿದ್ದ ೧ಲಕ್ಷರೂ ನಿಧಿಯ ಚೆಕ್ಕನ್ನು ಸಂಘದ ಅಧ್ಯಕ್ಷ ಡಿ.ಆರ್.ವೆಂಕಟೇಶ್ ಹಾಗೂ ಪದಾಧಿಕಾರಿಗಳು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಹಸ್ತಾಂತರಿಸಿದರು.
ನಂತರ ಸಂಘದ ಅಧ್ಯಕ್ಷರಾದ ಡಿ.ಆರ್.ವೆಂಕಟೇಶ್ ಮಾತನಾಡಿ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಜನಿಸಿ ಮೈಸೂರಿನ ನಿವಾಸಿಗಳಾಗಿ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ನಾವುಗಳು ಸಮಾಜಸೇವೆ ಮಾಡುವ ಸದುದ್ಧೇಶದಿಂದ ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಯ ಹಿತದೃಷ್ಟಿಯಿಂದ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಒಂದು ಲಕ್ಷರೂಗಳ ಚೆಕ್ ನೀಡುತ್ತಿದ್ದೇವೆ. ಜನರು ಆತ್ಮವಿಶ್ವಾಸದಿಂದ ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ನಿಯಂತ್ರಣ ಮಾಡಲು ಮುಂದಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಸಾಮಾಜಿಕ ಅಂತರವನ್ನು ಪಾಲಿಸಿ, ಮುಖಕ್ಕೆ ಮಾಸ್ಕ್ ಧರಿಸಿ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ತೊಳೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೋವಿಡ್ -೧೯ ಪರಿಹಾರ ನಿಧಿಗೆ ಒಂದು ಲಕ್ಷರೂ ಚೆಕ್ ನೀಡಿದ ಕೃಷ್ಣರಾಜಪೇಟೆ ತಾಲ್ಲೂಕಿನ ಮೈಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಾಮಾಜಿಕ ಕಾರ್ಯವನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ಶ್ಲಾಘಿಸಿ ಪ್ರಶಂಸಾ ಪತ್ರವನ್ನು ನೀಡಲಾಯಿತು
ಈ ಸಂದರ್ಭದಲ್ಲಿ ಕೋವಿಡ್ ೧೯ ಪರಿಹಾರ ನಿಧಿಗೆ ಚೆಕ್ ವಿತರಣಾ ಕಾರ್ಯದಲ್ಲಿ ಸಂಘದ ಹಿರಿಯ ಉಪಾಧ್ಯಕ್ಷ ಸಿ.ಚಲುವೇಗೌಡ, ಖಜಾಂಚಿ ಹೆಚ್.ಎಸ್.ಬಲರಾಂ, ಎಂ.ಕೆ.ದ್ಯಾವೇಗೌಡ, ಎಸ್.ಬಿ.ರಾಮಚಂದ್ರ, ಎ.ಆರ್.ರಘು, ಎಂ.ಪಿ.ಲೋಕೇಶ್, ಕಟ್ಟೆಕ್ಯಾತನಹಳ್ಳಿ ಯೋಗೇಶ್, ನಿರ್ದೇಶಕರಾದ ನಾಗೇಶ್, ನರಸೇಗೌಡ, ಎನ್.ರಾಮೇಗೌಡ, ಎಸ್.ಕುಮಾರ್ ಮತ್ತು ಶಿವನಂಜೇಗೌಡ ಮತ್ತಿತರರು ಹಾಜರಿದ್ದರು

error: