May 17, 2024

Bhavana Tv

Its Your Channel

ಸರ್ಕಾರದ ನಿಯಮವಳಿಯಂತೆ ಧಾರ್ಮಿಕ ಕೇಂದ್ರ ಪ್ರಾರಂಭಿಸಬೇಕು: ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್

ಮಂಡ್ಯ: ದೇವಾಲಯಗಳು, ಚರ್ಚುಗಳು ಹಾಗೂ ಪ್ರಾರ್ಥನಾ ಮಂದಿರಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮುಖಕ್ಕೆ ಮಾಸ್ಕನ್ನು ಧರಿಸಿಕೊಂಡು ನಿಯಮಿತವಾಗಿ ಭಗವಂತನ ದರ್ಶನ ಮಾಡಬೇಕು. ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿ, ತೀರ್ಥ ಸೇವನೆ ಹಾಗೂ ತೀರ್ಥ ಪ್ರೋಕ್ಷಣೆಯನ್ನು ಸರ್ಕಾರದ ನಿರ್ದೇಶನದಂತೆ ನಿಷೇಧಿಸಲಾಗಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ತಿಳಿಸಿದರು ಅವರು ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯ ಆವರಣದಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನ ದೇವಾಲಯಗಳ ಅರ್ಚಕರು, ಚರ್ಚು ಹಾಗೂ ಮಸೀದಿಗಳ ಧರ್ಮಗುರುಗಳು ಹಾಗೂ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಕಳೆದ ೭೮ದಿನಗಳಿಂದ ಬಾಗಿಲು ಮುಚ್ಚಿದ್ದ ದೇವಾಲಯಗಳು ಹಾಗೂ ಶ್ರದ್ಧಾ ಕೇಂದ್ರಗಳು ಭಕ್ತರು, ಸಾರ್ವಜನಿಕರ ದರ್ಶನಕ್ಕೆ ತೆರೆದಿವೆ. ಎಲ್ಲಾ ಸ್ಥಳಗಳಲ್ಲಿಯೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ದೇವರ ದರ್ಶನ ಮಾಡಬೇಕು. ಭಕ್ತರು ಹಾಗೂ ಸಾರ್ವಜನಿಕರಿಗೆ ಅರ್ಚಕರು ಮಂಗಳಾರತಿ ಹಾಗೂ ತೀರ್ಥ ಪ್ರಸಾದ ನೀಡುವುದನ್ನು ನಿಷೇಧಿಸಲಾಗಿದೆ..ಮಸೀದಿಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ ಎಂದು ಸುಧಾಕರ್ ಕಿವಿಮಾತು ಹೇಳಿದರು.
ಸಭೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ಬಿ.ಪಿ.ಬ್ಯಾಟರಾಯಗೌಡ, ಡಿ.ಲಕ್ಷ್ಮಣ್, ಪಟ್ಟಣದ ಬಾಲ ಏಸು ದೇವಾಲಯದ ಧರ್ಮಗುರು ರೆವರೆಂಡ್ ಫಾದರ್ ಆಂಥೋನಿಸ್ವಾಮಿ, ಭೂವರಾಹಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಮತ್ತಿತರರು ಉಪಸ್ಥಿತರಿದ್ದರು.

ವರದಿ. ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ

error: