April 28, 2024

Bhavana Tv

Its Your Channel

ಕೆ.ಆರ್.ಪೇಟೆ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಶಿಕ್ಷಕ ಶಿವರಾಮೇಗೌಡ ಆಯ್ಕೆ ಮಾಡಲು ಸಚಿವ ಡಾ.ನಾರಾಯಣಗೌಡ ಸೂಚನೆ,, ಸಚಿವರ ನಿರ್ಧಾರಕ್ಕೆ ಸರ್ಕಾರಿ ನೌಕರರ ಒಪ್ಪಿಗೆ, ಸೌಹಾರ್ದಯುತವಾಗಿ ನಡೆದ ನೌಕರರ ಸಮಾಲೋಚನಾ ಸಭೆ.

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಶಿವರಾಮೇಗೌಡ ಆಯ್ಕೆ ಮಾಡಲು ಸಚಿವ ಡಾ.ನಾರಾಯಣಗೌಡ ಸೂಚನೆ ..
ಅಧ್ಯಕ್ಷ ಸ್ಥಾನದ ಅವಧಿಯನ್ನು ಶಿಕ್ಷಕ ಪದ್ಮೇಶ್ ಅವರ ಜೊತೆ ಹಂಚಿಕೆ ಮಾಡಲು ಸಚಿವರ ನಿರ್ದೇಶನ, ಸಚಿವರ ನಿರ್ಧಾರಕ್ಕೆ ಸರ್ಕಾರಿ ನೌಕರರ ಒಪ್ಪಿಗೆ..
ಸೌಹಾರ್ದಯುತವಾಗಿ ನಡೆದ ನೌಕರರ ಸಮಾಲೋಚನಾ ಸಭೆ. ಶಿಕ್ಷಕರು ಸಮಾಜದ ಪರಿವರ್ತಕರಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವು ನಿರ್ಣಾಯಕವಾಗಿದೆ. ಆದ್ದರಿಂದ ಶಿಕ್ಷಕರು ಗುಂಪುಗಾರಿಕೆಯಿAದ ಹೊರಬಂದು ಸಮಾಜಮುಖಿಯಾಗಿ ಮುನ್ನಡೆಯಬೇಕು ಎಂದು ರಾಜ್ಯದ ತೋಟಗಾರಿಕೆ, ರೇಷ್ಮೆ, ಪೌರಾಡಳಿತ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಮನವಿ ಮಾಡಿದರು…

ಅವರು ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ನ ಸುಲೋಚನಮ್ಮ ಸಭಾಂಗಣದಲ್ಲಿ ನಡೆದ ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಕೆ.ಆರ್.ಪೇಟೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎನ್.ಜಯರಾಂ ಅವರ ವಯೋನಿವೃತ್ತಿಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆಮಾಡಲು ಈ ಸಭೆಯನ್ನು ಆಯೋಜಿಸಲಾಗಿದೆ. ಈ ಹಿಂದೆ ಮಾತುಕತೆಯಾಗಿದ್ದಂತೆ ಶಿಕ್ಷಕರಾದ ಶಿವರಾಮೇಗೌಡ ಮತ್ತು ಪದ್ಮೇಶ್ ಅವರು ಕ್ರಮವಾಗಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡು ದಕ್ಷ ಪ್ರಾಮಾಣಿಕ ಆಡಳಿತ ನೀಡಿ ಸರ್ಕಾರಿ ನೌಕರರ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಿ ಕೆಲಸ ಮಾಡಬೇಕು.. ಶಿಕ್ಷಕರು ಮೊದಲು ಗುಂಪುಗಾರಿಕೆಯಿAದ ಹೊರ ಬರಬೇಕು. ಶಿಕ್ಷಕ ವೃತ್ತಿಯು ಪವಿತ್ರವಾದ ವೃತ್ತಿಯಾದ್ದರಿಂದ ವೃತ್ತಿಗೌರವವನ್ನು ಕಾಪಾಡಿಕೊಂಡು ಬದ್ಧತೆಯನ್ನು ಪ್ರದರ್ಶನ ಮಾಡಬೇಕು…ಅಧ್ಯಕ್ಷ ಸ್ಥಾನದಂತೆಯೇ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಸ್ಥಾನವನ್ನು ಕ್ರಮವಾಗಿ ಪರಸ್ಪರ ಹಂಚಿಕೆ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು…
ನೌಕರರ ಭವನ ನಿರ್ಮಾಣಕ್ಕೆ ನಿವೇಶನ…ಕೃಷ್ಣರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ನೌಕರರ ಭವನದ ನಿರ್ಮಾಣಕ್ಕೆ ಸೂಕ್ತವಾದ ನಿವೇಶನವನ್ನು ದೊರಕಿಸಿಕೊಡುವ ಜೊತೆಗೆ ಭವನದ ನಿರ್ಮಾಣಕ್ಕೆ ತಮ್ಮ ತಂದೆತಾಯಿಗಳಾದ ಪುಟ್ಟಮ್ಮಚಿಕ್ಕೇಗೌಡರ ಹೆಸರಿನಲ್ಲಿ ಧನಸಹಾಯ ಮಾಡುವುದಾಗಿ ಸಚಿವ ನಾರಾಯಣಗೌಡ ಘೋಷಿಸಿದರು.

ಕೃಷ್ಣರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ ಮತ್ತು ಸರ್ಕಾರಿ ನೌಕರರ ಸಂಘದ ಮಾಜಿ ಪ್ರಧಾನಕಾರ್ಯದರ್ಶಿ ಪದ್ಮೇಶ್ ಅವರ ಗುಂಪುಗಳ ಶಿಕ್ಷಕರು ಹಾಗೂ ನೌಕರರು ಸಮಬಲದಲ್ಲಿ ಸಭೆಯಲ್ಲಿ ಭಾಗವಹಿಸಿದ್ದುದು ಕಂಡುಬoತು ..

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷರ ಆಯ್ಕೆಗಾಗಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷರಾದ ಕೆ.ಎಸ್.ಪ್ರಭಾಕರ್, ಎಸ್.ಅಂಬರೀಶ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರವಿ, ಪುರಸಭೆ ಸದಸ್ಯರಾದ ಶಾಮಿಯಾನತಿಮ್ಮೇಗೌಡ, ಗಿರೀಶ್, ಮುಖಂಡ ಕೊಮ್ಮೇನಹಳ್ಳಿ ಜಗಧೀಶ್, ಸಚಿವರ ಆಪ್ತಸಹಾಯಕರಾದ ದಯಾನಂದ, ರವಿ ಮತ್ತಿತರರು ಭಾಗವಹಿಸಿದ್ದರು.

ವರದಿ ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ
.

error: