April 28, 2024

Bhavana Tv

Its Your Channel

ಮೈಸೂರು ಚನ್ನರಾಯಪಟ್ಟಣ ರಸ್ತೆಯ ಅಂಬಾರಿ ಹೋಟೆಲ್ ಪಕ್ಕದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕ ಲೋಹಿತ್ ಅವರು ನೂತನವಾಗಿ ಆರಂಭಿಸಿದ ಉದ್ಯಮವನ್ನು ಕೊರೋನಾ ವಾರಿಯರ್ಸ್ ಉದ್ಘಾಟಿಸಿದರು

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಮೈಸೂರು ಚನ್ನರಾಯಪಟ್ಟಣ ರಸ್ತೆಯ ಅಂಬಾರಿ ಹೋಟೆಲ್ ಪಕ್ಕದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕ ಲೋಹಿತ್ ಅವರು ನೂತನವಾಗಿ ಆರಂಭಿಸಿದ ಉಧ್ಯಮವನ್ನು ಕೊರೋನಾ ವಾರಿಯರ್ಸ್ ಉದ್ಘಾಟಿಸಿ ಶುಭ ಹಾರೈಸಿದರು …

ಕೊರೋನಾ ವಾರಿಯರ್ಸ್ ಆದ ಕೆ.ಆರ್.ಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಸಿಂದಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸುರೇಶ್ ಮತ್ತು ತಾಲೂಕು ಪಂಚಾಯಿತಿ ಸದಸ್ಯ ಜಾನಕೀರಾಂ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದ ಲೋಹಿತ್ ನೂತನವಾಗಿ ತಾವು ಆರಂಬಿಸಿದ ಹಾರ್ಡ್ ವೇರ್, ಮೆಟಲ್ ಶೀಟ್, ಆಂಗ್ಲರ್ ಗಳು ಮತ್ತು ಪೈಪ್ ಅಂಗಡಿಗೆ ಶುಭ ಹಾರೈಸಿದ ಕೊರೋನಾ ವಾರಿಯರ್ಸ್ ಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು…

ಕೃಷ್ಣರಾಜಪೇಟೆ ಪಟ್ಟಣದಲ್ಲಿ ತಾವು ನೂತನವಾಗಿ ಆರಂಭಿಸಿರುವ ಉಧ್ಯಮದಲ್ಲಿ ಮನೆಗಳು ಹಾಗೂ ಗುಡಿ ಕೈಗಾರಿಕೆಗಳ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಇಂದಿನ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ರಿಯಾಯಿತಿ ಹಾಗೂ ಸ್ಪರ್ಧಾತ್ಮಕ ದರದಲ್ಲಿ ನೀಡಲು ಬದ್ಧರಾಗಿದ್ದು ಗ್ರಾಹಕರೇ ನಮಗೆ ದೈವಸ್ವರೂಪವಾಗಿದ್ದಾರೆ. ಕೃಷ್ಣರಾಜಪೇಟೆ ತಾಲ್ಲೂಕಿನ ಬಂಧುಗಳು ಹಾಗೂ ಗ್ರಾಹಕರು ನಮ್ಮ ಉದ್ಯಮದಲ್ಲಿ ವ್ಯವಹರಿಸಿ ತಮ್ಮನ್ನು ಹರಸಿ ಆಶೀರ್ವದಿಸಬೇಕೆಂದು ಲೋಹಿತ್ ಮನವಿ ಮಾಡಿದರು …

ಇದೇ ಸಂದರ್ಭದಲ್ಲಿ ಗಣಪತಿ ಹೋಮ ನಡೆಸಿ ಕೊರೋನಾ ಮಹಾಮಾರಿಯ ಸಂಕಷ್ಠವನ್ನು ನಿವಾರಿಸುವಂತೆ ಪ್ರಾರ್ಥಿಸಲಾಯಿತು. ಆಶಾ ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು…

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: